ಕಣ್ಣೂರು: ಮಗು ಸತ್ತೇ ಹೋಗಿದೆ ಅಂದುಕೊಂಡಿದ್ದರು. ಆದರೆ ಪೊಲೀಸ್ ಅಧಿಕಾರಿಯೊಬ್ಬರು ಕೊನೇ ಕ್ಷಣದಲ್ಲಿ ಸಿಪಿಆರ್ ಮಾಡುವ ಮೂಲಕ 9 ತಿಂಗಳ ಮಗುವಿನ ಮರುಜನ್ಮ ನೀಡಿದ್ದಾರೆ.
ಮುಹಮ್ಮದ್ ಫಾಜಿಲ್ ಅವರು ಕೊಲಚೇರಿಯ ಪಟ್ಟಾಯಂನಲ್ಲಿ ಹೊಸ ಪಾಸ್ಪೋರ್ಟ್ಸ್ ಪರಿಶೀಲನೆ ನಡೆಸುತ್ತಿದ್ದು.
ಈ ವೇಳೆ ಮನೆಯೊಂದರಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ತಕ್ಷಣ ಫಾಜಿಲ್ ಅಲ್ಲಿಗೆ ಹೋದರು. ಆ ಕ್ಷಣದಲ್ಲಿ 9 ತಿಂಗಳು ಮಗು ಪ್ರಜ್ಞೆಯಿಲ್ಲದೆ ಬಿದ್ದಿತ್ತು. ಕುಟುಂಬಸ್ಥರು ಮತ್ತು ಪಾಲಕರು ಮಗು ಸತ್ತಿದೆ ಎಂದು ಭಾವಿಸಿ ಅಳುತ್ತಿದ್ದರು.
ಎಲ್ಲರು ಅಳುತ್ತಿರುವಾಗ ಪೊಲೀಸ್ ಅಧಿಕಾರಿ ಫಾಜಿಲ್ ಒಂದು ಪ್ರಯತ್ನ ಮಾಡೇ ಬಿಡೋಣ ಅಂತಾ ಮಗುವಿಗೆ ಸಿಪಿಆರ್ ಮಾಡಿದರು. ಪವಾಡ ಎಂಬಂತೆ ಮಗು ಸಿಪಿಆರ್ಗೆ ಸ್ಪಂದಿಸಿ, ಮತ್ತೆ ಉಸಿರಾಡಲು ಆರಂಭಿಸಿತು. ಈ ವೇಳೆ ಅಳುತ್ತಿದ್ದವರಲ್ಲ ತಕ್ಷಣ ಅಳು ನಿಲ್ಲಿಸಿ ಮಗುವನ್ನು ನೋಡಲು ಧಾವಿಸಿದರು.
ಸಿಪಿಆರ್ ಬಳಿಕ ಮಗುವನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಇದೀಗ ಮಗು ಚೇತರಿಸಿಕೊಳ್ಳುತ್ತಿದೆ. ಸಮಯ ಪ್ರಜ್ಞೆ ಮೆರೆದ ಫಾಜಿಲ್ಗೆ ಪೊಲೀಸ್ ಇಲಾಖೆ ಸೇರಿದಂತೆ ಕೇರಳದ ಜನರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.