ಕಾಸರಗೋಡು: ಜಿಲ್ಲೆಯನ್ನು ರಾಜ್ಯದ ಮೊದಲ ಡಿಜಿಟಲ್ ಸಾಕ್ಷರತಾ ಜಿಲ್ಲೆ ಎಂದು ಘೋಷಿಸಲು ಜಿಲ್ಲಾ ಪಂಚಾಯತ್ ಜಿಲ್ಲಾ ಸಾಕ್ಷರತಾ ಮಿಷನ್, ಐಟಿ ಮಿಷನ್, ಕೈಟ್ ಗ್ರಂಥಾಲಯ ಮಂಡಳಿ ಮತ್ತು ನವಕೇರಳಂ ಸಹಯೋಗದಲ್ಲಿ ಡಿಜಿಟಲ್ ಸಾಕ್ಷರತೆಗಾಗಿ ಜಿಲ್ಲಾ ಮಟ್ಟದ ಕ್ರಿಯಾ ಸಮಿತಿಯ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಎಲ್ಲಾ ನಗರಸಭೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಸಂಘಟನಾ ಸಮಿತಿ ಮತ್ತು ನಗರಸಭೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಿತಿಯಿಂದಲೂ ಸಂಪನ್ಮೂಲ ಸಿಬ್ಬಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿ ವಿಭಾಗದಿಂದ ಕನಿಷ್ಠ ಐದು ವಾರ್ಡ್‍ಗಳಲ್ಲಿ ತರಬೇತಿ ಕಾರ್ಯಕ್ರಮ ಆರಂಭವಾಗಲಿದೆ. ಜಿಲ್ಲಾ ಮಟ್ಟದ ತರಬೇತಿಯನ್ನು ಫೆ.28ರಂದು ನಡೆಸಲು ತೀರ್ಮಾನಿಸಲಾಯಿತು. ವಾರ್ಡ್‍ಗಳಲ್ಲಿ ತರಗತಿ ನಡೆಸುತ್ತಿರುವ ಜನರಲ್ ಸ್ಟಾಫ್ ಬ್ರಿಗೇಡ್‍ಗೆ ಮಾರ್ಚ್ ಮೊದಲ ವಾರದಲ್ಲಿ ಪಂಚಾಯಿತಿ ಮಟ್ಟದಲ್ಲಿ ತರಬೇತಿ ನೀಡಲಾಗುವುದು.
ಕಾಸರಗೋಡು ಜಿಲ್ಲಾ ಪಂಚಾಯತ್ ಯೋಜನಾ ಸಮಿತಿ ಉಪಾಧ್ಯಕ್ಷ ಕೆ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಾಕ್ಷರತಾ ಮಿಷನ್ ಸಂಯೋಜಕ ಪಿ.ಎನ್. ಬಾಬು, ಜಿಲ್ಲಾ ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಡಾ.ಪಿ. ಪ್ರಭಾಕರನ್, 'ಕಿಲಾ'ಸಂಪನ್ಮೂಲ ಪ್ರತಿನಿಧಿ ಕೆ.ಕೆ. ರಾಘವನ್, ಅಕ್ಷಯ ಅಸಿ. ಕೋರ್ಡಿನೇಟರ್ ಕೆ. ಸಂತೋಷ್ ಕುಮಾರ್ ಕೆಐಟಿ ಸಂಯೋಜಕ ಅಬ್ದುಲ್ ಜಮಾಲ್ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ಸಂಯೋಜಕ ಎಚ್. ಕೃಷ್ಣ ಉಪಸ್ಥಿತರಿದ್ದರು. 50ಮನೆಗಳಿಗೆ ಒಂದು ತರಗತಿಯಂತೆ ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ 2 ಗಂಟೆಗಳಂತೆ ಐದು ದಿವಸ 10 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ.
ಜಿಲ್ಲಾ ಮಟ್ಟದ ಡಿಜಿಟಲ್ ಸಾಕ್ಷರತೆ: ಕ್ರಿಯಾ ಸಮಿತಿ ಸಭೆ
0
ಫೆಬ್ರವರಿ 14, 2023
Tags