ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಿರಿಮೆ ಉತ್ಸವವನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಶಮೀನಾ ಟೀಚರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಧ್ಯಾಪಕ ಸೇವೆಯಿಂದ ನಿವೃತ್ತರಾಗಲಿರುವ ಜಿ. ಲ್.ಪಿ. ಶಾಲೆ ಹೇರೂರಿನ ಮುಖ್ಯ ಶಿಕ್ಷಕ ಹಾಗೂ ಮಂಗಲ್ಪಾಡಿ ಪಂಚಾಯತಿ ಪಿ. ಇ. ಸಿ ಕಾರ್ಯದರ್ಶಿ ವಸಂತ ಕುಮಾರ್ ಸಿ.ಕೆ ಮತ್ತು ಕಾಯರ್ ಕಟ್ಟೆ ಜಿ.ಎಲ್.ಪಿ.ಎಸ್.ಶಾಲಾ ಮುಖ್ಯೋಪಾಧ್ಯಾಯ ಅಬ್ದುಲ್ ಕರೀಂ ಪಿ.ಕೆ. ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಹಸ್ತಪ್ರತಿಯನ್ನೂ ಬಿಡುಗಡೆಗೊಳಿಸಲಾಯಿತು.
ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ.ಕೆ, ಮಂಗಲ್ಪಾಡಿ ಪಂಚಾಯತಿ ಉಪಾಧ್ಯಕ್ಷ ಯೂಸಫ್ ಹೇರೂರ್, ಮಂಗಲ್ಪಾಡಿ ಪಂಚಾಯತಿ ಸದಸ್ಯ ಅಬ್ದುಲ್ ಶರೀಫ್ ಟಿ.ಯಂ., ಮಂಗಲ್ಪಾಡಿ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಯಂ. ಮುಸ್ತಫಾ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಲಿ ಮಾಸ್ತರ್, ಬಿ.ಆರ್.ಸಿ ಸಂಯೋಜಕ ತಿಲಕ, ಶಾಲಾ ನಿರ್ವಾಹಕ ಸಮಿತಿ ಅಧ್ಯಕ್ಷ ಇಬ್ರಾಹಿಂ ಹನೀಫಿ, ಶಾಲಾ ಯಂ. ಪಿ. ಟಿ. ಎ ಅಧ್ಯಕ್ಷೆ ರಸೀನಾ ಹಾಗೂ ಶಾಲಾ ನಿರ್ವಾಹಕ ಸಮಿತಿಯ ಉಪಾಧ್ಯಕ್ಷ ಇಸ್ಮಾಸಯಿಲ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಸ್ವಾಗತಿಸಿ, ಹಿರಿಯ ಶಿಕ್ಷಕಿ ಅಪ್ಸ ವಂದಿಸಿದರು. ಶಿಕ್ಷಕ ರಿಯಾಸ್ ಯಂ.ಯಸ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿದ್ಯಾರ್ಥಿ ಗಳಿಂದ ಹಾಡು,ನೃತ್ಯ, ನಾಟಕ,ಕಥೆ ಹೇಳುವುದು, ಒಗಟು ಬಿಡಿಸುವುದು ಮೊದಲಾದ ಹಿರಿಮೆ ಚಟುವಟಿಕೆಗಳ ಮೂಲಕ ಸಂಪನ್ನಗೊಂಡಿತು.
ಮುಳಿಂಜ ಶಾಲೆಯಲ್ಲಿ ಹಿರಿಮೆ ಉತ್ಸವ
0
ಫೆಬ್ರವರಿ 24, 2023
Tags