ತಿರುವನಂತಪುರಂ: ಕಾಂತಾರ ಚಲನಚಿತ್ರದ ‘ವರಾಹರೂಪಂ’ ಕೃತಿಯ ಹಕ್ಕುಸ್ವಾಮ್ಯ ಉಲ್ಲಂಘಿಸಿ ಚಿತ್ರದಲ್ಲಿ ಸೇರಿಸಿರುವ ಪ್ರಕರಣದಲ್ಲಿ ಕೇರಳದಲ್ಲಿ ವಿತರಕರಾಗಿರುವ ನಟ ಪೃಥ್ವಿರಾಜ್ ಸೇರಿದಂತೆ ಇನ್ನೂ ಏಳು ಮಂದಿ ಸಾಕ್ಷಿ ಹೇಳಲಿದ್ದಾರೆ.
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನೂ ವಿಚಾರಣೆ ನಡೆಸಲಾಗುವುದು. ಪ್ರಕರಣದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ವಿಚಾರಣೆ ಪೂರ್ಣಗೊಂಡಿದೆ. ರಿಷಬ್ ಶೆಟ್ಟಿ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರ್ ಅವರನ್ನು ಕೋಝಿಕ್ಕೋಡ್ ಟೌನ್ ಪೋಲೀಸರು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಮಾತೃಭೂಮಿ ಮ್ಯೂಸಿಕ್ ಮತ್ತು ಥೈಕುಡಂ ಬ್ರಿಡ್ಜ್ ನೀಡಿದ ದೂರಿನ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ವರಾಹರೂಪಂ ಹಾಡು ಸಹಿತ ಕಾಂತಾರ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಇದೇ ವೇಳೆ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣದಲ್ಲಿ ಕಾಂತಾರ ನಿರ್ಮಾಪಕ ಮತ್ತು ನಿರ್ದೇಶಕರ ವಿರುದ್ಧ ತನಿಖೆ ಮುಂದುವರಿಸಲು ತನಿಖಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ನಂತರ ಇಬ್ಬರನ್ನೂ ವಿಚಾರಣೆ ನಡೆಸಲಾಯಿತು.
‘ವರಾಹರೂಪಂ’ ಹಾಡಿನೊಂದಿಗೆ ಕಾಂತಾರ ಚಿತ್ರದ ಪ್ರದರ್ಶನವನ್ನು ನಿಷೇಧಿಸಿದ ಕ್ರಮಕ್ಕೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ರಿಷಬ್ ಶೆಟ್ಟಿ ಮತ್ತು ಇತರರಿಗೆ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿತ್ತು.
‘ವರಾಹರೂಪಂ’: ಪೃಥಿರಾಜ್ ಸೇರಿದಂತೆ ಏಳು ಜನರ ಹೇಳಿಕೆ ತೆಗೆದುಕೊಳ್ಳಲು ಕ್ರಮ
0
ಫೆಬ್ರವರಿ 15, 2023