ಕಾಸರಗೋಡು| ಗಡಿನಾಡ ಸಾಂಸ್ಕøತಿಕ ಅಕಾಡಮಿ ಕಾಸರಗೋಡು, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಭಾರತ್ ಭವನ ತಿರುವನಂತಪುರ-ಕೇರಳ ಸರ್ಕಾರ ಸಹಯೋಗದೊಂದಿಗೆ'ತಿರುವನಂತಪುರದ ಪೌಂಡ್ ಕಾಲನಿಯ ಭಾರತ್ ಭವನ ಸಭಾಂಗಣದಲ್ಲಿ ಆಯೋಜಿಸಲಾದ 'ಅನಂತಪುರಿ ಗಡಿನಾಡ ಸಾಂಸ್ಕøತಿಕ ಉತ್ಸವ' ಕೇರಳದ ರಾಜಧಾನಿಯಲ್ಲಿ ಕನ್ನಡ ಮಾರ್ದನಿಸುವಂತೆ ಮಾಡಿತು.
ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಸಮಾರಂಭಕ್ಕೆ ಚಾಲನೆ ನೀಡಿದರು. ಕಾಸರಗೋಡು ಗಡಿನಾಡ ಸಾಂಸ್ಕøತಿಕ ಅಕಾಡಮಿ ಸಂಸ್ಥಾಪಕ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಡೆದ ಸಾಧಕರಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಸಮಾಜಸೇವಕ ಎಲ್.ಆರ್ ಪೋತ್ತಿ, ಸಾಹಿತಿ ಪ್ರಭಾಕರ ರಾವ್ ಬನದಗದ್ದೆ, ಕವಿ ಉದನೇಶ್ವರ ಪ್ರಸಾದ್ ಮೂಲಡ್ಕ, ಪತ್ರಕರ್ತ ಪುರುಷೋತ್ತಮ ಪೆರ್ಲ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಾಸರಗೋಡು ಸರ್ಕಾರಿ ಕಾಲೇಜು ಉಪನ್ಯಾಸಕ ಡಾ. ರತ್ನಾಕರ ಮಲ್ಲಮೂಲೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಿಂದ ಕನ್ನಡ, ಮಲಯಾಳ, ಕೊಂಕಣಿ ಭಾಷೆಗಳ ಕವಿತೆಗಳ ವಾಚನ ನಡೆಯಿತು. ಕಾಸರಗೋಡಿನ ಬಹುಭಾಷೆಯ ವೈವಿಧ್ಯತೆಯನ್ನು ಅನಾವರಣಗೊಳಿಸಿತು. ನಿವೃತ್ತ ಪ್ರಾಧ್ಯಾಪಕ ಡಾ. ರಾಮ ಅಧ್ಯಕ್ಷತೆಯಲ್ಲಿ ನಡೆದ ಗಡಿನಾಡಿನಲ್ಲಿ ಭಾಷಾ ವೈವಿಧ್ಯ ವಿಚಾರಗೋಷ್ಠಿಯಲ್ಲಿ ಕಾಸರಗೋಡಿನ ಬಹುಭಾಷೆಗಳ ವಿವಿಧ ಆಯಾಮ ತೆರೆದಿಡಲು ಕಾರಣವಾಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುಮಾರಿ ಮೇಧಿನಿ ಹೆಗಡೆ ಅವರಿಂದ ಭರತನಾಟ್ಯ, ಮಿತ್ರ ಬೆಳ್ಳೂರು ತಂಡದಿಂದ ಭಜನೆ, ¸ಜಾನಪದ ಹಾಡುಗಳು, ಕೊಂಕಣಿ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಕೀಲ ಥಾಮಸ್ ಡಿ.ಸೋಜ ಬಳಗದವರು ಪ್ರಸ್ತುತಪಡಿಸಿದ 'ಕುರುಕುರುಮಾಮ'ಜನ ಮನ್ನಣೆಗೆ ಪಾತ್ರವಾಯಿತು. ಬೆಳ್ಳೂರು ಗೋಳಿಕಟ್ಟೆ ಮೊಗೇರ ದುಡಿನಲಿಕೆ ತಂಡದಿಂದ ದುಡಿ ನಲಿಕೆ, ಯೋಗ ಫಾರ್ ಕಿಡ್ಸ್ ಕರಂದಕ್ಕಾಡು ಕಾಸರಗೋಡು ತಂಡದಿಂದ ಯೋಗ ಪ್ರದರ್ಶನ, ಕಾಸರಗೋಡು ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದಿಂದ ನರಕಾಸುರ ವಧೆ ಯಕ್ಷಗಾನ ಬೊಂಬೆಯಾಟ ಪ್ರದರ್ಶನ ನಡೆಯಿತು. ಪ್ರೊ. ಎ.ಶ್ರೀನಾಥ್, ರವಿ ನಾಯ್ಕಾಪು, ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು.
ಅನಂತಪುರಿಯಲ್ಲಿ ಮೊಳಗಿದ ಕನ್ನಡದ ಡಿಂಡಿಮ-ಬಹುಭಾಷಾ ಸಾಂಸ್ಕøತಿಕ ಸಮ್ಮಿಲನ
0
ಫೆಬ್ರವರಿ 10, 2023