ನಾವು ಸಾಕಷ್ಟು ಬಾರಿ ಆರೇಂಜ್ ಜ್ಯೂಸ್ ಮನೆಯಲ್ಲಿ ಮಾಡಿದಾಗ ಜ್ಯೂಸ್ ಸೆಂಟರ್‌ನಲ್ಲಿ ಸಿಗುವ ಜ್ಯೂಸ್ ರೀತಿ ಏಕೆ ಬರಲ್ಲ ಅಂದುಕೊಳ್ಳುತ್ತೇವೆ ಅಲ್ವಾ? ಸಾಕಷ್ಟು ಜನರು ಆರೇಂಜ್ ಜ್ಯೂಸ್ ಮಾಡುವಾಗ ಅದರ ಬೀಜ ಕೂಡ ಹಾಕುತ್ತಾರೆ, ಆದರೆ 5-6 ಕಿತ್ತಳೆ ಬೀಜ ತೆಗೆಯಬೇಕೆಂದರೆ ತುಂಬಾ ಸಮಯ ಬೇಕಾಗುವುದು ಆದ್ದರಿಂದ ಬೀಜ ಸಮೇತ ಹಾಕಿ ಗ್ರೈಂಡ್ ಮಾಡುತ್ತೇವೆ ಅಲ್ವಾ?
ಕಿತ್ತಳೆ ಜ್ಯೂಸ್ ಮಾಡುವಾಗ ಇನ್ಮುಂದೆ ಈ ಟ್ರಿಕ್ಸ್ ಬಳಸಿ ಬೀಜ ಸುಲಭವಾಗಿ ತೆಗೆಯಬಹುದು, ಆದ್ದರಿಂದ ಜ್ಯೂಸ್ ತುಂಬಾ ರುಚಿಯಾಗಿರುತ್ತದೆ.
Orange Juice Recipe, ಕಿತ್ತಳೆ ಜ್ಯೂಸ್ ರೆಸಿಪಿ
ngredients
-
ಬೇಕಾಗುವ ಸಾಮಗ್ರಿ
4-5 ಕಿತ್ತಳೆ
ಚಿಟಿಕೆಷ್ಟು ಬ್ಲ್ಯಾಕ್ ಸಾಲ್ಟ್
-
ಮಾಡುವ ವಿಧಾನ
* ಕತ್ತಳೆಯನ್ನು ತಣ್ಣೀರಿನಲ್ಲಿ ತೊಳೆಯಿರಿ, ನಂತರ ಸಮ ಅರ್ಧ ಭಾಗವನ್ನಾಗಿ ಕತ್ತರಿಸಿ.
* ನಂತರ ಅದರ ಬೀಜ ತೆಗೆದು, ಸಿಪ್ಪೆ ಸುಲಿಯಿರಿ
* ನಂತರ ಬ್ಲೆಂಡರ್‌ನಲ್ಲಿ ಹಾಕಿ, ನೀರು ಸೇರಿಸಿ ಬ್ಲೆಂಡ್ ಮಾಡಿ ರಸ ತೆಗೆಯಿರಿ
* ಆ ರಸವನ್ನು ಸೋಸಿ ಗ್ಲಾಸ್‌ಗೆ ಹಾಕಿ ಬ್ಲ್ಯಾಕ್ ಸಾಲ್ಟ್ ಮಿಕ್ಸ್ ಮಾಡಿದರೆ ರುಚಿರುಚಿಯಾದ ಆರೇಂಜ್ ಜ್ಯೂಸ್ ರೆಡಿ.
- Instructions
- ನೀವು ಆರೇಂಜ್ ಜ್ಯೂಸ್ ಮಾಡಲು ಸಿಟ್ರಸ್ ಜ್ಯೂಸರ್, ಬ್ಲೆಂಡರ್ ಅಥವಾ ಸ್ಲೋ ಜ್ಯೂಸರ್ ಬಳಸಿ ಜ್ಯೂಸ್ ತಯಾರಿಸಿ
Nutritional Informationಆರೇಂಜ್ ಜ್ಯೂಸ್ ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು
* ಆರೇಂಜ್ ಜ್ಯೂಸ್‌ನಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
* ಇದರಲ್ಲಿ ಯಾವುದೇ ಪ್ರಿಸರ್ವೇಟಿವ್ ಬಳಸಿರಲ್ಲ, ಆದ್ದರಿಂದ ಒಳ್ಳೆಯದು.
* ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
* ಸರ್ಜರಿಯಾದವರಿಗೆ, ಅನಾರೋಗ್ಯವಿದ್ದಾಗ ಈ ಜ್ಯೂಸ್ ಕುಡಿಯುವುದರಿಂದ ಬೇಗನೆ ಚೇತರಿಸಿಕೊಳ್ಳಬಹುದು.
* ಇನ್ನು ಮಕ್ಕಳಿಗೆ ಹಾಗೂ ವಯಸ್ಸಾದವರಿಗೆ ಈ ಜ್ಯೂಸ್ ಮಾಡಿ ಕೊಡುವುದು ಒಳ್ಳೆಯದು.
* ಮಕ್ಕಳಿಗೆ ಆರೇಂಜ್ ಜ್ಯೂಸ್ ನೀಡುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಕಾರಿ.