HEALTH TIPS

ಪ್ಲಾಸ್ಟಿಕ್‌ ಬಾಟಲಿ ಮರುಬಳಕೆಯಿಂದ ಸಿದ್ಧಗೊಂಡ ಜಾಕೆಟ್‌ ಧರಿಸಿದ ಪ್ರಧಾನಿ ಮೋದಿ

 

        ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ಲಾಸ್ಟಿಕ್‌ ಬಾಟಲಿ ಮರುಬಳಕೆ ಮಾಡಿ ಸಿದ್ಧಪಡಿಸಿದ ನೀಲಿ ಬಣ್ಣದ ಜಾಕೆಟ್‌ ಅನ್ನು ಧರಿಸಿ ಬುಧವಾರ ಸಂಸತ್ತಿನಲ್ಲಿ ಕಾಣಿಸಿಕೊಂಡರು.

             ಬೆಂಗಳೂರಿನಲ್ಲಿ ಸೋಮವಾರ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಈ ಜಾಕೆಟ್ ಅನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿತ್ತು.         

                  ಐಒಸಿಎಲ್ ವಾರ್ಷಿಕವಾಗಿ 10 ಕೋಟಿ ಪ್ಲಾಸ್ಟಿಕ್‌ ಬಾಟಲಿಗಳನ್ನು ಬಟ್ಟೆಯಾಗಿ ಮರುಬಳಕೆ ಮಾಡುತ್ತದೆ.

               ತ್ಯಾಜ್ಯದ ಬಾಟಲಿಗಳಿಂದ ಬಟ್ಟೆಯನ್ನು ತಯಾರಿಸುವ ಪ್ರಕ್ರಿಯೆಯು ತೊಳೆಯುವುದು, ಒಣಗಿಸುವುದು ಮತ್ತು ಸಂಗ್ರಹಿಸಿದ ಬಾಟಲಿಗಳನ್ನು ಸಣ್ಣ ತುಣುಕುಗಳಾಗಿ ಪುಡಿ ಮಾಡುವುದನ್ನು ಒಳಗೊಂಡಿರುತ್ತದೆ.

           ಈ ಸಲದ ಬಜೆಟ್‌ನಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನ ಪರಿವರ್ತನೆ ಕ್ಷೇತ್ರಕ್ಕೆ ₹ 35,000 ಕೋಟಿ ಘೋಷಿಸಿದ್ದರು ಮತ್ತು ಪರಿಸರ ಸ್ನೇಹಿ ಹಸಿರು ಉತ್ತೇಜನವನ್ನು ಸರ್ಕಾರದ ಏಳು ಆದ್ಯತೆಗಳಲ್ಲಿ ಸೇರಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries