HEALTH TIPS

ಕಾಸರಗೋಡು ಕಾಲೇಜಿನಲ್ಲಿ ಏನಾಗುತ್ತಿದೆ: ಮನಸ್ಸು ಬಿಚ್ಚಿಟ್ಟ ಸ್ಥಳಾಂತರಗೊಂಡ ಪ್ರಾಂಶುಪಾಲೆ: ಕಾಲೇಜಿನಲ್ಲಿ ಎಸ್.ಎಫ್.ಐ ಲಿಂಗಭೇದಭಾವ ಮತ್ತು ಅನೈತಿಕತೆಯನ್ನು ನಡೆಸುತ್ತವೆ: ಮಾಜಿ ಪ್ರಾಂಶುಪಾಲರಿಂದ ಪ್ರತಿಕ್ರಿಯೆ


                  ಕಾಸರಗೋಡು: ಕಾಸರಗೋಡು ಸರಕಾರಿ ಕಾಲೇಜನ್ನು ಲೈಂಗಿಕ ವಿಕೃತಿ, ಅನೈತಿಕತೆ, ಮಾದಕ ವಸ್ತುಗಳ ವ್ಯಾಪಾರದ ಕೇಂದ್ರವನ್ನಾಗಿ ಎಸ್.ಎಫ್.ಐ ಮಾಡುತ್ತಿದೆ ಎಂದು ಸ್ಥಳಾಂತರಗೊಂಡ ಪ್ರಾಂಶುಪಾಲೆ ಡಾ.ಎಂ.ರಮಾ ಹೇಳಿದರು.
          ಎಸ್.ಎಫ್.ಐ. ಮುಖಂಡರ ವಿರುದ್ಧ ಹಲವು ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ. ಎಸ್‍ಎಫ್‍ಐಗಳ ದುಷ್ಕøತ್ಯಗಳ ವಿರುದ್ಧ ಪ್ರತಿಕ್ರಿಯಿಸಿದ್ದಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಎಂ ರಮ ಹೇಳಿದ್ದಾರೆ. ಮಹಿಳಾ ಉನ್ನತ ಶಿಕ್ಷಣ ಸಚಿವರು ಈ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕು. ವಾಸ್ತವ ಹೀಗಿರುವಾಗ ಶಿಕ್ಷಕಿಯೂ ಆದ ಉನ್ನತ ಶಿಕ್ಷಣ ಸಚಿವರು ಏಕಪಕ್ಷೀಯವಾಗಿ ತನ್ನನ್ನು ಪ್ರಾಂಶುಪಾಲರ ಸ್ಥಾನದಿಂದ ಕೆಳಗಿಳಿಸಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ. ಸಾಮಾನ್ಯ ಶಿಕ್ಷಕಿಯಾಗಿಯೇ ಮುಂದುವರಿಯಬೇಕಾದರೂ ಮಕ್ಕಳನ್ನು ಎಸ್‍ಎಫ್‍ಐ ಗಳು ನಾಶ ಮಾಡಲು ಅವಕಾಶ ನೀಡುವುದಿಲ್ಲ ಎಂದು ಎಂ.ರಮಾ ಹೇಳಿದ್ದಾರೆ.
           ಪ್ರಾಂಶುಪಾಲರಾಗಿ ಅಲ್ಲ, ಪ್ರಾಧ್ಯಾಪಕಿಯಾಗಿಯೂ ಸಂಸ್ಥೆಯಲ್ಲಿ ಇರಬಾರದು ಎಂಬುದು ಎಸ್‍ಎಫ್‍ಐಗಳ ಬೇಡಿಕೆ. ಕಾಲೇಜು ಮೈದಾನದಲ್ಲಿ ಎಸ್‍ಎಫ್‍ಐ ಗಳ ದುಷ್ಕೃತ್ಯಗಳನ್ನು ಹೊರಗಿನವರು ಸೆರೆಹಿಡಿದು ತಮ್ಮ ಬಳಿಗೆ ಕಳುಹಿಸಿದ್ದಾರೆ ಎಂದು ಎಂ ರಮ ಹೇಳಿದರು. ಎಸ್‍ಎಫ್‍ಐಗಳು ಎಲ್ಲ ರೀತಿಯಲ್ಲೂ ಮಕ್ಕಳನ್ನು ನಾಶಪಡಿಸುವ ಚಟುವಟಿಕೆಗಳನ್ನು ಮಾಡುತ್ತಿವೆ. ಪಾಲಕರು ಕಾಲೇಜಿನಲ್ಲಿ ಮಿಂಚಿನ ಪರೀಕ್ಷೆ ನಡೆಸಿ ಸತ್ಯಾಂಶ ತಿಳಿದುಕೊಳ್ಳಬೇಕು. ತನ್ನ ವಿರುದ್ದ ನೈತಿಕ ಪೆÇಲೀಸ್ ಗಿರಿ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇತರ ಶಿಕ್ಷಕರೂ ಈ ಹೊಲಸುಗಳನ್ನು ಮೌನವಾಗಿ ನೋಡುತ್ತಿದ್ದಾರೆ. ತಾನು ನೇರವಾಗಿ ಕಂಡ, ಅನುಭವಿಸಿದ ವಿಷಯಗಳನ್ನು ಹೇಳುತ್ತಿರುವುದಾಗಿ ಅವರು ಹೇಳಿರುವರು.
                ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದವರೂ ಪ್ರತಿನಿತ್ಯ ಬಂದು ರಾತ್ರಿಯವರೆಗೂ ಕಾಲೇಜಿನಲ್ಲಿಯೇ ಇರುತ್ತಾರೆ. ಕೊಳಕು ಪ್ರದರ್ಶನ ಮಾಡುವವರಿಗೆ ಹೋಗಿ ಬೇರೆಡೆ ರೂಮ್ ಮಾಡಿ ಇದೆಲ್ಲ ಮಾಡಬಹುದು ಎಂದು ಹೇಳಬೇಕಾಗಿ ಬಂದಿದೆ. ಇದೆಲ್ಲದರ ವಿರುದ್ಧ ಏಕವ್ಯಕ್ತಿ ಸೇನೆಯಾಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಎಂ ರಮ ಹೇಳಿದರು.
          ತಂದೆ-ತಾಯಂದಿರಿಗೆ ತಮ್ಮ ಮಕ್ಕಳು ಎಂದೆಂದಿಗೂ ಇಲ್ಲದಂತಹ ಪರಿಸ್ಥಿತಿಗಳನ್ನು ಎಸ್‍ಎಫ್‍ಐಗಳು ನಿರ್ಮಿಸುತ್ತಿದ್ದಾರೆ. ಕಾಲೇಜು ಪರಿಸರದ ಅಂಗಡಿಗಳು, ಗೂಡಂಗಳಿಗಳಿಗೆ ಈ ವಿಷಯಗಳು ತಿಳಿದಿವೆ. ಮಕ್ಕಳನ್ನು ಸ್ವಂತ ಮಕ್ಕಳಂತೆ ಕಾಣುವ ಮೂಲಕ ದಾರಿತಪ್ಪದಂತೆ ಇದೆಲ್ಲದರ ವಿರುದ್ಧ ಧ್ವನಿಯೆತ್ತಬೇಕಾಯಿತು ಎಮದು ಡಾ.ರಮಾ ತಿಳಿಸಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries