ಕುಂಬಳೆ: ಮಂಗಲ್ಪಾಡಿ ಪಂಚಾಯತಿ ಆಡಳಿತ ಸಮಿತಿಯ ದುರಾಡಳಿತ ಮತ್ತು ಗಬ್ಬೆದ್ದು ನಾರುವ ತ್ಯಾಜ್ಯ ಸಮಸ್ಯೆಯ ವಿರುದ್ದ ಎನ್.ಸಿ.ಪಿ. ಹೋರಾಟವನ್ನು ತೀವ್ರಗೊಳಿಸುವುದಾಗಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಇದರ ಅಂಗವಾಗಿ ಮಂಗಲ್ಪಾಡಿ ಮಂಡಲ ಸಮಿತಿ ನೇತೃತ್ವದಲ್ಲಿ ಇಂದು ಬೆಳಗ್ಗೆ 9.30ಕ್ಕೆ ಕೈಕಂಬದಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬ್ಲಾಕ್ ಅಧ್ಯಕ್ಷ ಮಹ್ಮದ್ ಕೈಕಂಬ ರ್ಯಾಲಿಯ ನಾಯಕತ್ವ ವಹಿಸುವರು. ಎನ್.ಸಿ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುಬೇರ್ ಪಡ್ಪು ಉದ್ಘಾಟಿಸುವರು. ವಿವಿಧ ಕೇಂದ್ರಗಳಲ್ಲಿ ಸ್ವಾಗತ ನೀಡಲಾಗುವುದು. ಸಂಜೆ 5.30ಕ್ಕೆ ಸಾಮಾನ್ಯ ಸಭೆಯೊಂದಿಗೆ ಉಪ್ಪಳದಲ್ಲಿ ಸಮಾರೋಪಗೊಳ್ಳಲಿದೆ.
ಜಿಲ್ಲಾಧ್ಯಕ್ಷ ಕರೀಂ ಚಂದೇರ ಸಮಾರೋಪ ಸಮಾರಂಭವನ್ನು ಉದ್ಘಾಟಿಸುವರು.ಎಸ್.ಫಕ್ರುದ್ದೀನ್, ಹಮೀದ್ ಕೋಸ್ ಮಾಸ್, ರಾಘವ ಚೇರಾಲ್, ಮಾತನಾಡುವರು.
ಈ ಹಿಂದೆ ಎಲ್‍ಡಿಎಫ್ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ನೀಡಿದ ಭರವಸೆಯನ್ನು ಅಧಿಕಾರಿಗಳು ಈಡೇರಿಸದ ಕಾರಣ ಎನ್‍ಸಿಪಿ ಮುಷ್ಕರಕ್ಕೆ ಮುಂದಾಗಿದೆ ಎಂದು ಮುಖಂಡರು ಮಾಹಿತಿ ನೀಡಿದರು. ಜುಬೇರ್ ಪಡ್ಪು, ಮಹ್ಮದ್ ಕೈಕಂಬ, ಅಬ್ದುಲ್ ರಹಿಮಾನ್ ಹಾಜಿ, ಅಶ್ರಫ್ ಪಚ್ಲಂಪಾರೆ, ಸುರೇಂದ್ರನ್ ಕೆ.ಎಸ್. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಗಲ್ಪಾಡಿಯಲ್ಲಿ ಕಸದ ಸಮಸ್ಯೆ ಮತ್ತು ಭ್ರಷ್ಟ ಆಡಳಿತದ ವಿರುದ್ಧ ಇಂದು ಎನ್‍ಸಿಪಿ ಪ್ರತಿಭಟನಾ ಮೆರವಣಿಗೆ
0
ಫೆಬ್ರವರಿ 20, 2023
Tags