ತಿರುವನಂತಪುರಂ: ಇಂಧನ ಸೆಸ್ ಮತ್ತು ತೆರಿಗೆ ಹೆಚ್ಚಳದ ವಿರುದ್ಧ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆ ಹಿನ್ನಲೆಯಲ್ಲಿ ಸದನವನ್ನು ಮುಂದೂಡಲಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಸ್ಪೀಕರ್ ಡಯಾಸ್ ಎದುರು ಹಾಗೂ ಮಧ್ಯದಲ್ಲಿ ಪ್ರತಿಪಕ್ಷಗಳು ಧರಣಿ ನಡೆಸಿದರು. ಪ್ರತಿಪಕ್ಷಗಳ ಗದ್ದಲದಿಂದಾಗಿ ಪ್ರಶ್ನೋತ್ತರ ಕಲಾಪ ಭಾಗಶಃ ರದ್ದಾಯಿತು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಸದನ ಅಲ್ಲೋಲಕಲ್ಲೋಲವಾಯಿತು.
ಇದೇ ತಿಂಗಳ 27ರಂದು ವಿಧಾನಸಭೆ ಸಭೆ ಮತ್ತೆ ಸೇರಲಿದೆ. ಪ್ರತಿಪಕ್ಷದ ಶಾಸಕರು ಇಂದು ಕಾಲ್ನಡಿಗೆ ಮೆರವಣಿಗೆ ಮೂಲಕ ಸದನವನ್ನು ತಲುಪಿದರು. ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಇಂದು ಸದನ ಮುಗಿಯುತ್ತಿದ್ದಂತೆ ಧರಣಿಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿಕೆ ನೀಡಿದರು.
ಇಂಧನ ಸೆಸ್ ಮತ್ತು ತೆರಿಗೆ ಹೆಚ್ಚಳದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆ: ಸದನ ಮುಂದೂಡಿಕೆ
0
ಫೆಬ್ರವರಿ 09, 2023