ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಗಾಯತ್ರೀ ದೇವಿ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮವು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀಕ್ಷೇತ್ರ ಕಟೀಲಿನ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ಫೆ. 22 ರಂದು ಬುಧವಾರ, ಚಂಡಿಕಾ ಯಾಗ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಶೀರ್ವಚನ ಅನುಗ್ರಹಿಸಲಿರುವರು. ಕಟೀಲಿನ ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣರವರ ದಿವ್ಯ ಉಪಸ್ಥಿತಿಯಲ್ಲಿ, ಮುಂಬಯಿಯ ಉದ್ಯಮಿ, ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಾ. ಸಿ. ಸೋಮಶೇಖರ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ ಮಿಜಾರು, ಕಾಸರಗೋಡು ಯುನೈಟೆಡ್ ಮೆಡಿಕಲ್ ಸೆಂಟರ್‍ನ ಡಾ.ಮಂಜುನಾಥ ಶೆಟ್ಟಿ, ಮುಂಬಯಿಯ ಉದ್ಯಮಿ ಮೋಹನ ಪೂಜಾರಿ, ಜಗದ್ಗುರು ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್ ವಿಶ್ವಸ್ಥ ಬೆಂಗಳೂರಿನ ಇ.ಎಸ್. ರಾಮ ಭಟ್ ಹಾಗೂ ಮಹಾಬಲೇಶ್ವರ ಭಟ್ ಎಡಕ್ಕಾನ, ನಿತ್ಯಾನಂದ ಯೋಗಾಶ್ರಮದ ಮುಂಬಯಿ ಸಮಿತಿ ಅಧ್ಯಕ್ಷ ರಾಜೇಶ್ ಕೆ.ರೈ, ಮತ್ತು ಕುಂಜತ್ತೂರಿನ ಬಾಲಕೃಷ್ಣ ದೀಕ್ಷಾರವರುಗಳು ಉಪಸ್ಥಿತರಿರುವರು. ಮಧ್ಯಾಹ್ನ ನಂತರ, ಎಸ್.ಎಸ್.ಎನ್.ವಿ.ಪಿ ಕೊಂಡೆವೂರು ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಮತ್ತು ಸವಿಜೀವನಂ ನೃತ್ಯಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯವೂ ನಡೆಯಲಿದೆ.
ಡಿ. 20 ರಂದು ಸೋಮವಾರ ಸೂರ್ಯಾಸ್ತಕ್ಕೆ ದೀಪ ಪ್ರಜ್ವಲನೆಯೊಂದಿಗೆ ಭಜನೋತ್ಸವ ಆರಂಭವಾಗಲಿದ್ದು, 21 ರಂದು ಮಂಗಳವಾರ ಸೂರ್ಯಾಸ್ತಕ್ಕೆ ಸಂಪನ್ನಗೊಳ್ಳಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾಗಿ ಕೊಂಡೆವೂರು ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ಭಜನೋತ್ಸವ
0
ಫೆಬ್ರವರಿ 16, 2023
Tags