HEALTH TIPS

ಬ್ಲ್ಯಾಕ್‌ಹೆಡ್ಸ್‌ ಸಂಪೂರ್ಣ ಹೋಗಲಾಡಿಸಲು ಈ ಎಕ್ಸ್‌ಪರ್ಟ್ ಟಿಪ್ಸ್ ಬೆಸ್ಟ್

 ಬ್ಲ್ಯಾಕ್‌ ಹೆಡ್ಸ್ ಮುಖದಲ್ಲಿ ಬಂದರೆ ಮುಖದ ಕಳೆ ಮಂಕಾಗುವುದು, ಅಷ್ಟು ಮಾತ್ರವಲ್ಲ ಬ್ಲ್ಯಾಕ್‌ ಹೆಡ್ಸ್‌ ಇದ್ದಾಗ ಮೇಕಪ್‌ ಮಾಡಿದಾಗ ಕೂಡ ಮುಖ ಆಕರ್ಷಕವಾಗಿ ಕಾಣುವುದಿಲ್ಲ. ಕೆಲವರು ಬ್ಲ್ಯಾಕ್‌ ಹೆಡ್ಸ್‌ ಹೋಗಲಾಡಿಸಲು ಕ್ಲೀನ್‌ಅಪ್‌ ಮಾಡಿಸುತ್ತಾರೆ, ಆದರೆ ಸೆನ್ಸಿಟಿವ್ ತ್ವಚೆ ಇರುವವರಿಗೆ ಕ್ಲೀನ್‌ಅಪ್ ಮಾಡಿಸಿದಾಗ ಮೊಡವೆ ಸಮಸ್ಯೆ ಹೆಚ್ಚಾಗುವುದು.

ಚರ್ಮ ರೋಗ ತಜ್ಞರ ಪ್ರಕಾರ ಬ್ಲ್ಯಾಕ್‌ ಹೆಡ್ಸ್‌ ಸಮಸ್ಯೆ ಬಂದರೆ ಪಾರ್ಲರ್‌ಗೆ ಹೋಗುವುದಕ್ಕಿಂತ ತ್ವಚೆ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆ ಪಡೆಯುವುದು ಒಳ್ಳೆಯದು.

 ಬ್ಲ್ಯಾಕ್‌ ಹೆಡ್ಸ್ ಹೋಗಲಾಡಿಸುವುದು ಹೇಗೆ ಎಂದು ನೋಡೋಣ ಬನ್ನಿ:

ಬ್ಲ್ಯಾಕ್‌ ಹೆಡ್‌ ಮನೆಯಲ್ಲಿ ಕೀಳಬೇಡಿ

ಬ್ಲ್ಯಾಕ್‌ ಹೆಡ್ಸ್‌ ಸಮಸ್ಯೆಯಿದ್ದರೆ ಅದನ್ನು ತಜ್ಞರ ಬಳಿ ಹೋಗಿ ತೆಗಿಸಬೇಕು, ಇದರಿಂದ ಮುಖದಲ್ಲಿ ಕಲೆಗಳು ಉಂಟಾಗುವುದನ್ನು ತಡೆಗಟ್ಟಬಹುದು. ನೀವೇ ಬ್ಲ್ಯಾಕ್‌ ಹೆಡ್ಸ್‌ ತೆಗೆಯುವುದರಿಂದ ಕಲೆಗಳು ಉಳಿಯುವ ಸಾಧ್ಯತೆ ಇದೆ. ಮನೆಯಲ್ಲಿಯೇ ಬ್ಲ್ಯಾಕ್‌ ಹೆಡ್ಸ್‌ ಕೀಳುವುದರಿಂದ ಬ್ಲ್ಯಾಕ್ ಹೆಡ್ಸ್‌ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಮುಖದಲ್ಲಿ ರಂಧ್ರಗಳು ಉಂಟಾಗುವುದನ್ನು ತಡೆಗಟ್ಟವುದು ಹೇಗೆ?

ಮುಖದ ರಂಧ್ರಗಳಲ್ಲಿ ಬೆವರು ಅಥವಾ ಕೊಳೆ ನಿಲ್ಲದಂತೆ ಎಚ್ಚರವಹಿಸಬೇಕು, ಆದ್ದರಿಂದ ಮುಖವನ್ನು ಆಗಾಗ ತೊಳೆಯಬೇಕು. ಅಲ್ಲದೆ ನಿಮ್ಮ ಮುಖದ ತ್ವಚೆಗೆ ಸರಿಹೊಂದುವ ಕ್ಲೆನ್ಸರ್ ಹಾಕಿ ಮುಖ ತೊಳೆಯಿರಿ. ಅಲ್ಲದೆ ನಿಮ್ಮ ಮೇಕಪ್ ಬ್ರೆಷ್‌ಗಳನ್ನು ಸ್ವಚ್ಛವಾಗಿಡಿ, ಅಲ್ಲದೆ ನಿಮ್ಮ ಮೇಕಪ್‌ ಬ್ರೆಷ್‌ಗಳನ್ನು ಬೇರೆಯವರ ಜೊತೆ ಹಂಚಿಕೊಳ್ಳಬೇಡಿ. ಪ್ರತಿದಿನ ದಿಂಬಿನ ಕವರ್ ಬದಲಾಯಿಸಿ

ಇನ್ನು ಡೀಪ್ ಕ್ಲೆ ನ್ಸ್ ಮಾಡುವುದಾದರೆ ಚರ್ಮ ರೋಗ ರಜ್ಞರ ಬಳಿಯೇ ಮಾಡಿಸುವುದು ಒಳ್ಳೆಯದು.

ಇನ್ನು ಈ ಟಿಪ್ಸ್ ಕೂಡ ಬ್ಲ್ಯಾಕ್‌ ಹೆಡ್ಸ್ ತಡೆಗಟ್ಟಲು ಸಹಕಾರಿಯಾಗಿದೆ salicylic acidನಿಂದ ಮುಖವನ್ನು ಕ್ಲೆನ್ಸ್ ಮಾಡಿ

* ಇದು ಮುಖದಲ್ಲಿರುವ ಅತ್ಯಧಿಕ ಜಿಡ್ಡಿನಂಶ ತೆಗೆಯಲು ಸಹಕಾರಿ
* ಡೆಡ್‌ ಸ್ಕಿನ್ ಹೋಗಲಾಡಿಸುತ್ತದೆ.
* ಅಲ್ಲದೆ ಕೊಳೆ, ಎಣ್ನೆಯಂಶ, ಮೇಕಪ್ ಇವುಗಳನ್ನು ಸ್ವಚ್ಛಗೊಳಿಸಿ ಮುಖದ ತ್ವಚೆಯ ಆರೋಗ್ಯ ಕಾಪಾಡುತ್ತದೆ.

ಮುರಾಡ್‌ ಟೈಮ್ ರಿಲೇಸ್ ಆ್ಯಕ್ಟಿವ್ ಕ್ಲೆನ್ಸರ್

ಇದು ಮುಖ ಊದಿಕೊಳ್ಳುವುದು ತಡೆಗಟ್ಟುತ್ತದೆ, ಮುಖದ ತ್ವಚೆಯನ್ನು ಶುದ್ಧವಾಗಿಡುವುದರ ಜೊತೆಗೆ ಮುಖ ತುಂಬಾ ಡ್ರೈಯಾಗುವುದನ್ನು ತಡೆಗಟ್ಟುತ್ತದೆ.

ಡೆರ್ಮಾಲಾಜಿಕಲ್ ಕ್ಲಿಯರಿಂಗ್ ಸ್ಕಿನ್ ವಾಶ್‌ (Dermalogica Clearing Skin Wash)

ಇದು ತ್ವಚೆಯನ್ನು ಸ್ವಚ್ಛವಾಗಿಡುವುದರ ಜೊತೆ ತ್ವಚೆಯಲ್ಲಿ ನೆರಿಗೆ ಮೂಡುವುದನ್ನು ತಡೆಗಟ್ಟುತ್ತದೆ.

ಕ್ಲೇ ಮಾಸ್ಕ್ ಬಳಸಿ
ಕ್ಲೇ ಮಾಸ್ಕ್ ಬಳಸುವುದರಿಂದ ತ್ವಚೆಯಲ್ಲಿನ ಜಿಡ್ಡಿನಂಶ ಹೋಗಲಾಡಿಸು ಸಹಕಾರಿಯಾಗಿದೆ. ಕೆಲವೊಂದು ಕ್ಲೇ ಮಾಸ್ಕ್‌ನಲ್ಲಿ ಸಲ್ಫ್ರ್ ಇರುತ್ತದೆ, ಇದು ಕೂಡ ಡೆಡ್‌ಸ್ಕಿನ್‌ ಹೋಗಲಾಡಿಸಲು ಸಹಕಾರಿಯಾಗಿದೆ.

ಇನ್ನು ನಿಮ್ಮ ಮೇಕಪ್‌ನಲ್ಲಿ ಮಲಗಬೇಡಿ
ನೀವು ಮಲಗುವ ಮುನ್ನ ನಿಮ್ಮ ಮುಖದಲ್ಲಿ ಮೇಕಪ್‌ ತೆಗೆದು ಮಲಗಬೇಕು. ಮೇಕಪ್‌ನಲ್ಲಿ ಮಲಗಿದರೆ ಬ್ಲ್ಯಾಕ್ ಹೆಡ್‌ ಸಮಸ್ಯೆ ಮತ್ತಷ್ಟು ಅಧಿಕವಾಗುವುದು. ನಿಮ್ಮ ಮುಖ ತೊಳೆಯುವ ಮೊದಲು ಮೇಕಪ್‌ ತೆಗೆದು ನಂತರ ಕ್ಲೆನ್ಸರ್ ಬಳಸಿ ಮುಖ ತೊಳೆಯಿರಿ.

ಪೋರ್‌ ಸ್ಪ್ರಿಪ್ಸ್ ಬಳಸಬೇಡಿ
ಮುಖದಲ್ಲಿರುವ ಬ್ಲ್ಯಾಕ್‌ ಹೆಡ್‌, ವೈಡ್‌ ಹೆಡ್‌ ಹೋಗಲಾಡಿಸಲು ಇದು ಸಹಕಾರಿ ಎನ್ನುವ ಹಲವು ಪೋರ್‌ ಸ್ಟ್ರಿಪ್ಸ್ ಸಿಗುತ್ತದೆ, ಆದರೆ ನೀವು ಅದನ್ನು ಬಳಸಲು ಹೋಗಬೇಡಿ, ಏಕೆಂದರೆ ನಿಮ್ಮ ತ್ವಚೆಯ ಆರೋಗ್ಯ ಕಾಪಾಡುವ ಅಂಶಗಳನ್ನು ಕೂಡ ಅದು ನಾಶ ಮಾಡುತ್ತದೆ. ಇವುಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ತುಂಬಾನೇ ಡ್ರೈಯಾಗಬಹುದು.

ನಿಮ್ಮ ಸಮಯವನ್ನು ಬೆಂಝೋಯಿಲ್ ಪೆರಾಕ್ಸೈಡ್ ಮೇಲೆ ವೇಸ್ಟ್ ಮಾಡಬೇಡಿ

ಮೊಡವೆ ಹೋಗಲಾಡಿಸಲು ಬೆಂಝೋಯಿಲ್ ಪೆರಾಕ್ಸಟೈಡ್ ಬಳಸುತ್ತಾರೆ, ಆದರೆ ಈ ಬೆಂಝೋಲ್ ಪೆರಾಕ್ಸೈಡ್‌ ಬ್ಲ್ಯಾಕ್‌ ಹೆಡ್ಸ್‌ ಹೋಗಲಾಡಿಸಲು ಸಹಾಯವಾಗಲ್ಲ, ಬೆಂಝೋಯಿಲ್ ಪೆರಾಕ್ಸೈಡ್ ಮೊಡವೆ ಉಂಟು ಮಾಡುವ ಬ್ಯಾಕ್ಟಿರಿಯಾ ಹೋಗಲಾಡಿಸಲು ಸಹಕಾರಿ. ಆದರೆ ಬ್ಲ್ಯಾಕ್ ಹೆಡ್ಸ್‌ ಬ್ಯಾಕ್ಟಿರಿಯಾದಿಂದ ಉಂಟಾಗುವುದಲ್ಲ, ಆದ್ದರಿಂದ ಬ್ಲ್ಯಾಕ್ ಹೆಡ್ಸ್ ಹೋಗಲಾಡಿಸಲು ಚರ್ಮ ರೋಗ ತಜ್ಞರ ಬಳಿ ಹೋಗಿ ತ್ವಚೆಯನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.

ಬ್ಲ್ಯಾಕ್ ಹೆಡ್ಸ್‌ ತಡೆಗಟ್ಟಲು ಆಗಾಗ ಮುಖ ತೊಳೆಯಿರಿ, ಮುಖಕ್ಕೆ ಮೇಕಪ್‌ ಹಚ್ಚುವಾಗ ನಿಮ್ಮ ತ್ವಚೆಗೆ ಹೊಂದುವ ಗುಣಮಟ್ಟದ ಮೇಕಪ್ ಬಳಸಿ.


 

 

 

 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries