ಕಾಸರಗೋಡು: ವೈಜ್ಞಾನಿಕ ರಿತಿಯಲ್ಲಿ ಕೃಷಿಯನ್ನು ನಡೆಸುವ ಮೂಲಕ ಕೃಷಿಯಲ್ಲಿ ಗರಿಷ್ಠ ಆದಾಯ ಗಳಿಸಲು ಸರ್ಕಾರ ಕೃಷಿಕರನ್ನು ಪ್ರೋತ್ಸಾಹಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜಿಲ್ಲೆಯ ಪಿಲಿಕ್ಕೋಡ್ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಸೋಮವಾರ ಆಯೋಜಿಸಿದ್ದ 'ಸಫಲಂ ಫಾಂ ಕಾರ್ನಿವಲ್-2023'ಉದ್ಘಾಟಿಸಿ ಮಾತನಾಡಿದರು.
ಕೃಷಿಭವನಗಳನ್ನು ಸ್ಮಾರ್ಟ್ ಸೇವಾ ಕೇಂದ್ರಗಳನ್ನಾಗಿಸುವುದು ಸರ್ಕಾರದ ಲಕ್ಷ್ಯವಾಗಿದೆ. ಆಧುನಿಕ ಕೃಷಿ ವ್ಯವಸ್ಥೆಗೆ ಅನುಗುಣವಾಗಿ ಆರ್ಟಿಫಿಶಿಯಲ್, ಇಂಟೆಲಿಜೆನ್ಸ್, ರೊಬೋಟಿಕ್ ಕ್ಲೌಡ್ ಕಂಪ್ಯೂಟಿಂಗ್ ಸವಲತ್ತುಗಳ ಪ್ರಯೋಜನವನ್ನು ಬಳಸಿಕೊಳ್ಳಲು ಮುಂದಾಗಬೇಕಾಗಿದೆ. ಜಾಗತಿಕ ಹವಾಮಾನ ವೈಪರೀತ್ಯ ಕೃಷಿ ಸೇರಿದಂತೆ ಮಾನವ ಸಂಕುಲಕ್ಕೆ ಹೊಸ ಸವಾಲು ಸೃಷ್ಟಿಸಿದ್ದು, ಇದರ ವಿರುದ್ಧ ಸಂಘಟಿತ ಪ್ರಯತ್ನ ಮುಂದುವರಿಸಬೇಕಾಗಿದೆ. ಕೇರಳ ಬಜೆಟ್‍ನಲ್ಲಿ ಕೃಷಿ ವಲಯಕ್ಕೆ 972ಕೋಟಿ ರೂ., ಮೀಸಲಿರಿಸಿದ್ದು ಕೃಷಿಯಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷೆ ಸಾಧ್ಯ ಎಂದು ತಿಳಿಸಿದರು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಸಕರಾದ ಎಂ. ರಾಜಗೋಪಾಲನ್, ಟಿ.ಈ ಮಧುಸೂಧನನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್ ಚಂದ್, ಕೇರಳ ಕೃಷಿ ವಿಶ್ವ ವಿದ್ಯಾಲಯ ಉಪಕುಲಪತಿ ಡಾ. ಆರ್ಯ ಕೆ, ಉತ್ತರ ವಲಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ. ಕೆ. ವನಜಾ, ಮಾಜಿ ಶಾಸಕ ಕೆ. ಕುಞÂರಾಮನ್, ನೀಲೇಶ್ವರ ನಗರಸಭಾ ಅಧ್ಯಕ್ಷ ಮಾಧವನ್ ಮಣಿಯರ ಉಪಸ್ಥಿತರಿದ್ದರು.
ಕೃಷಿಕರ ಆದಾಯಹೆಚ್ಚಳಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು-ಮುಖ್ಯಮಂತ್ರಿ ಪಿಣರಾಯಿ ವಿಜಯನ್
0
ಫೆಬ್ರವರಿ 20, 2023
Tags