ತಿರುವನಂತಪುರ: ಕಾಮಗಾರಿ ಮುಗಿದು ಮೂರು ವರ್ಷ ಕಳೆದರೂ ಕಿಫ್ಬಿಯಿಂದ ಹಣ ಲಭಿಸದೆ ರಾಜ್ಯಾದ್ಯಂತ ಅನೇಕ ಗುತ್ತಿಗೆದಾರರು ಆತ್ಮಹತ್ಯೆಯ ಅಂಚಿನಲ್ಲಿದ್ದಾರೆ.
2018ರಿಂದ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಕಿಫ್ಬಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೂರು ವರ್ಷ ಕಳೆದರೂ ಕಿಫ್ಬಿ ಅಧಿಕಾರಿಗಳು ಬಿಲ್ ಪಾಸ್ ಮಾಡಲು ಮುಂದಾಗಿಲ್ಲ. ಹೊಸ ನಿಯಮಗಳು ಮತ್ತು ನಿಬಂಧನೆಗಳನ್ನು ಒಡ್ಡಿ ಕಾಡಲಾಗುತ್ತಿದೆ ಎಂದು ಅವಲತ್ತುಕೊಳ್ಳಲಾಗಿದೆ. ಹೊಸ ಗುತ್ತಿಗೆಯನ್ನೂ ಕೈಗೆತ್ತಿಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗಿದೆ. ಜೀವನ ಜಾರುತ್ತಿದೆ. ತಮಗೆ ಬರಬೇಕಾದ ಹಣ ಕೊಡಲು ಮುಂದಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳದೇ ಬೇರೆ ದಾರಿಯಿಲ್ಲ ಎನ್ನುತ್ತಾರೆ ಗುತ್ತಿಗೆದಾರರು.
ಕಿಫ್ಬಿ ನಿಧಿಯು ಮೊದಲ ಪಿಣರಾಯಿ ಸರ್ಕಾರದ ನವಕೇರಳ ಮಿಷನ್‍ನ ಮುಖ್ಯ ಕಾರ್ಯದ ಬಂಡವಾಳವಾಗಿತ್ತು. ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಕಿಫ್ಬಿ ನಿಧಿ ಬಳಸಲಾಗುವುದು ಎಂದು ಘೋಷಿಸಲಾಗಿತ್ತು. ಆಗ ಕೈಗೆತ್ತಿಕೊಂಡ ಬಹುತೇಕ ಯೋಜನೆಗಳು ಇಂದಿಗೂ ಮಂಜೂರಾಗಿಲ್ಲ. ಎರಡನೇ ಪಿಣರಾಯಿ ಸರ್ಕಾರ ನವಕೇರಳ ಮಿಷನ್ ಅನ್ನು ಸಂಪೂರ್ಣವಾಗಿ ಕೈಬಿಟ್ಟಿತು. ಅಂದು ಗುತ್ತಿಗೆ ಪಡೆದ ಗುತ್ತಿಗೆದಾರರು ಇಂದು ಕಂಗೆಟ್ಟಿದ್ದಾರೆ.
ಕಿಪ್ಬಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸಲು ರಾಜ್ಯ ಸರ್ಕಾರದಿಂದ ಸ್ಥಾಪಿಸಲಾದ ಒಂದು ಕಾಪೆರ್Çರೇಟ್ ಸಂಸ್ಥೆಯಾಗಿದೆ. ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಥಾಮಸ್ ಐಸಾಕ್ ಕಿಫ್ಬಿ ಮೂಲಕ ಐದು ವರ್ಷಗಳಲ್ಲಿ 50,000 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಗುರಿಯಾಗಿಟ್ಟುಕೊಂಡು ಯೋಜನೆಗಳನ್ನು ಪರಿಚಯಿಸಿದ್ದರು. ಆದರೆ ಕಿಫ್ಬಿ ಮೂಲಕ 30,000 ಕೋಟಿ ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು.
ಕಿಫ್ಬಿಯಿಂದ ಮಂಜೂರಾಗದ ಹಣ: ಆತ್ಮಹತ್ಯೆಯ ಅಂಚಿನಲ್ಲಿ ಗುತ್ತಿಗೆದಾರರು; ಸರ್ಕಾರದ ವಿರುದ್ಧ ಗಂಭೀರ ಆರೋಪ
0
ಫೆಬ್ರವರಿ 15, 2023