ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವವು ಜರಗಿತು. ವರ್ಷಂಪ್ರತಿಯಂತೆ ಶನಿವಾರ ಬೆಳಗ್ಗೆ ಮಹಾಗಣಪತಿ ಹೋಮ, ಶತರುದ್ರಾಭಿಷೇಕ, ಮಧ್ಯಾಹ್ನ ತುಲಾಬರ ಸೇವೆ, ಮಹಾಪೂಜೆ ಜರಗಿತು. ಸಂಜೆ ಗಂಗಾದರನ್ ಮಾರಾರ್ ನೀಲೇಶ್ವರ ಮತ್ತು ಬಳಗದವರಿಂದ ತಾಯಂಬಕ, ರಾತ್ರಿ ಶ್ರೀದೇವರ ಬಲಿ ಉತ್ಸವ, ನವಕಾಭಿಷೇಕ, ವಸಂತಪೂಜೆ, ಶ್ರೀಭೂತಬಲಿ ಹಾಗೂ ಭಾನುವಾರ ಬೆಳಗ್ಗೆ ಶ್ರೀದೇವರ ಬಲಿ ಉತ್ಸವ, ಬಟ್ಳುಕಾಣಿಕೆ, ರಾಜಾಂಗಣ ಪ್ರಸಾದ ಜರಗಿತು. ಮಧ್ಯಾಹ್ನ ಶ್ರೀ ಪಿಲಿಚಾಮುಂಡಿ ದೈವದ ಕೋಲ, ಅರಸಿನ ಹುಡಿ ಪ್ರಸಾದದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಪೆರಡಾಲ ಶಿವರಾತ್ರಿ ಮಹೋತ್ಸವ, ಪಿಲಿಚಾಮುಂಡಿ ದೈವದ ಕೋಲ
0
ಫೆಬ್ರವರಿ 20, 2023
Tags