ಕೊಚ್ಚಿ: ಪಾಪ್ಯುಲರ್ ಫ್ರಂಟ್ ಕಪ್ಪುಹಣ ಡೀಲ್ ಪ್ರಕರಣದಲ್ಲಿ ಎಸ್ ಡಿಪಿಐ ಮುಖಂಡರ ವಿರುದ್ಧ ತನಿಖೆಯ ಮುಂದುವರಿಕೆಯಾಗಿ ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಯ್ ಅರೈಕಲ್ ನನ್ನು ಎನ್‍ಐಎ ವಿಚಾರಣೆಗೊಳಪಡಿಸಿದೆ.
ಇನ್ನಷ್ಟು ಎಸ್ ಡಿಪಿಐ ಮುಖಂಡರಿಗೆ ವಿಚಾರಣೆಗೆ ನೋಟಿಸ್ ಬಂದಿದೆ ಎಂದು ವರದಿಯಾಗಿದೆ.
ಬಂಧಿತ ಎಸ್‍ಡಿಪಿಐ ರಾಜ್ಯ ಕಾರ್ಯದರ್ಶಿ ಪಿ.ಕೆ.ಉಸ್ಮಾನ್‍ಗೆ ಸಂಬಂಧಿಸಿ ವಿಚಾರಣೆ ನಡೆಸಲಾಗಿದೆ. ಎಸ್‍ಡಿಪಿಐನ ಹಣಕಾಸು ವ್ಯವಹಾರವನ್ನು ಉಸ್ಮಾನ್ ನಿರ್ವಹಿಸುತ್ತಿದ್ದ. ಕಳೆದ ಸೆಪ್ಟೆಂಬರ್‍ನಲ್ಲಿ ಎನ್‍ಐಐ ನಡೆಸಿದ ಬೃಹತ್ ದಾಳಿಯಲ್ಲಿ ಬಂಧಿತ 22 ನಾಯಕರಲ್ಲಿ ಪಿಕೆ ಉಸ್ಮಾನ್ ಒಬ್ಬರು. ಪಾಪ್ಯುಲರ್ ಫ್ರಂಟ್ ನಿಂದ ಎಸ್ ಡಿಪಿಐಗೆ ಬಂದವರನ್ನು ಮುಖ್ಯವಾಗಿ ಪ್ರಶ್ನಿಸಲಾಗಿದೆ. ಇದಕ್ಕೂ ಮುನ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜ್ಮಲ್ ಇಸ್ಮಾಯಿಲ್ ಅವರನ್ನು ಕೊಚ್ಚಿ ಘಟಕ ಪ್ರಶ್ನಿಸಿತ್ತು.
ದೆಹಲಿಯಲ್ಲಿ ದಾಖಲಾದ ಪ್ರಕರಣದಲ್ಲಿ ಕೊಟ್ಟಾಯಂ ಜಿಲ್ಲೆಯ ಎಸ್‍ಡಿಪಿಐ ಮುಖಂಡರಿಗೆ ನೋಟಿಸ್ ಕಳುಹಿಸಲಾಗಿದೆ. ನಿಷೇಧದ ನಂತರ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಮತ್ತು ಮುಖಂಡರು ಒಟ್ಟಾಗಿ ಎಸ್‍ಡಿಪಿಐ ಸೇರಿದ್ದಾರೆ ಎಂಬ ಮಾಹಿತಿ ಎನ್‍ಐಎಗೆ ಲಭಿಸಿದೆ. ಎನ್‍ಐಎ ಹಲವು ಎಸ್‍ಡಿಪಿಐ ಮುಖಂಡರನ್ನು ವಿಚಾರಣೆಗಾಗಿ ಕೊಚ್ಚಿಯ ಕಚೇರಿಗೆ ಕರೆಸಿತ್ತು.
ಪಿಎಫ್‍ಐಗೆ ಹಣದ ಹರಿವು ನಿಂತಿರುವುದರಿಂದ, ನಿμÉೀಧಿತ ಸಂಘಟನೆಯ ರಾಜಕೀಯ ಅಂಗವಾದ ಎಸ್‍ಡಿಪಿಐ ಮೂಲಕ ನಿಧಿಯನ್ನು ನಿರ್ವಹಿಸುವ ಸೂಚನೆಗಳಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಎಸ್‍ಡಿಪಿಐ ಮುಖಂಡರನ್ನು ವಿಚಾರಣೆಗೊಳಪಡಿಸಲಾಗುವುದು.
"ಹಗಲಿನಲ್ಲಿ ಒಂದು ಪಕ್ಷ, ರಾತ್ರಿಯಲ್ಲಿ ಮತ್ತೊಂದು ಪಕ್ಷ"; ಪಾಪ್ಯುಲರ್ ಫ್ರಂಟ್ ಕಪ್ಪುಹಣ ಡೀಲ್ ಬಗ್ಗೆ ಎಸ್ ಡಿಪಿಐ ನಾಯಕರ ತನಿಖೆ
0
ಫೆಬ್ರವರಿ 06, 2023