ಸಮರಸ ಚಿತ್ರಸುದ್ದಿ: ಕಾಸರಗೋಡು:: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕೇರಳ ಬ್ಯಾಂಕ್ ನೌಕರರ ಕಾಂಗ್ರೆಸ್ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಬ್ಯಾಂಕ್ ನೌಕರರು ಕೇರಳ ಬ್ಯಾಂಕ್ ಕಾಸರಗೋಡು ಸಿಪಿಸಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಎಕೆಬಿಎಫ್ ಜಿಲ್ಲಾ ಕಾರ್ಯದರ್ಶಿ ಇ.ವಿ.ಮೋಹನನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಪಿ.ಉಣ್ಣಿಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಪ್ರಕಾಶ್, ಜಿಲ್ಲಾ ಮುಖಂಡರಾದ ಸಿ.ಜೀನಾ, ಪಿ.ಲತಾ, ಪ್ರವೀಣ್ ನೀಲೇಶ್ವರಂ, ಶಶಿಧರನ್ ಕಾನತ್ತೂರು, ರಾಜ್ಯ ಉಪಾಧ್ಯಕ್ಷ ಎ.ಪ್ರಕಾಶ್ ರಾವ್ ಮುಂತದವರು ಉಪಸ್ಥಿತರಿದ್ದರು.
ಬ್ಯಾಂಕ್ ನೌಕರರಿಂದ ಪ್ರತಿಭಟನೆ
0
ಫೆಬ್ರವರಿ 17, 2023