ಕಾಸರಗೋಡು: ಚೆರುವತ್ತೂರಿನಿಂದ ಮಂಗಳೂರು ತೆರಳುವ ಚೆರ್ವತ್ತೂರು-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‍ಪ್ರೆಸ್ ರೈಲು(ರೈಲು ಸಂಖ್ಯೆ.06491)ಗೆ ಫೆ. 17ರಿಂದ ಕಾಸರಗೋಡಿನ ಕಳನಾಡು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಂಜೂರುಗೊಳಿಸಿ ರೈಲ್ವೆ ಪಾಲಕ್ಕಾಡ್ ಡಿವಿಶನ್ ಆದೇಶ ಹೊರಡಿಸಿದೆ. ಚೆರ್ವತ್ತೂರಿನಿಂದ ಬೆಳಗ್ಗೆ 6.10ಕ್ಕೆ ಹೊರಡುವ ರೈಲು 6.19ಕ್ಕೆ ನೀಲೇಶ್ವರ, 6.29ಕ್ಕೆ ಕಾಞಂಗಾಡು, 6.34ಕ್ಕೆ ಬೇಕಲ, 6.44ಕ್ಕೆ ಕೋಟಿಕುಳಂ, 6.49ಕ್ಕೆ ಕಳನಾಡು, 6.53ಕ್ಕೆ ಕಾಸರಗೋಡು, 7.04ಕ್ಕೆ ಕುಂಬಳೆ, 7.14ಕ್ಕೆ ಉಪ್ಪಳ, 7.24ಕ್ಕೆ ಮಂಜೇಶ್ವರ, 7.34ಕ್ಕೆ ಉಳ್ಳಾಲ, 8.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿರುವುದಾಗಿ ಪ್ರಕಟಣೆ ತಿಳಿಸಿದೆ.
ಚೆರ್ವತ್ತೂರು-ಮಂಗಳೂರು ಡೈಲಿ ಎಕ್ಸ್‍ಪ್ರೆಸ್‍ಗೆ ಕಳನಾಡಿನಲ್ಲಿ ಹೆಚ್ಚುವರಿ ನಿಲುಗಡೆ
0
ಫೆಬ್ರವರಿ 16, 2023