ತಿರುವನಂತಪುರ: 'ಕೇಂದ್ರ ಸಚಿವ ವಿ. ಮುರಳೀಧರನ್ ಅವರ ಇಲ್ಲಿನ ನಿವಾಸದ ಮೇಲೆ ಕಳೆದ ವಾರ ದಾಳಿ ನಡೆಸಿದ್ದ ಆರೋಪದ ಮೇರೆಗೆ 46 ವರ್ಷದ ವ್ಯಕ್ತಿಯೊಬ್ಬನನ್ನು ಭಾನುವಾರ ಬಂಧಿಸಲಾಗಿದೆ' ಎಂದು ಪೊಲೀಸರು ಹೇಳಿದರು.
'ಕಣ್ಣೂರಿನ ನಿವಾಸಿ ಮನೋಜ್ ಎಂಬಾತ ಬಂಧಿತ ವ್ಯಕ್ತಿ.
ನಮ್ಮ ಬಳಿ ಆರೋಪಿಯ ಸಿ.ಸಿ.ಟಿ.ವಿ ದೃಶ್ಯಾವಳಿಗಳು ಇದ್ದವು ಹಾಗೂ ನಾವು ಆತನನ್ನು ಹುಡುಕುತ್ತಿದ್ದೆವು. ಇದೇ ವೇಳೆ, ಇಲ್ಲಿಗೆ ಸಮೀಪದ ತಂಪನೂರು ಪಟ್ಟಣದಿಮದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಮನೋಜ್‌ನನ್ನು ಬಂಧಿಸಲಾಗಿದೆ' ಎಂದು ಅವರು ತಿಳಿಸಿದರು.
ಬಂಧಿತ ವ್ಯಕ್ತಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೊಲೀಸರು, 'ಈತ ಮಾನಸಿಕ ರೋಗಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ತಂಪನೂರು ಈ ಮೊದಲೇ ಆರೋಪಿಗೆ ಚಿರಪರಿಚಿತ. ಆರೋಪಿಯು ಈ ಮೊದಲು ಇಲ್ಲಿನ ಹೋಟೆಲ್‌ಗಳಲ್ಲಿ ಕೆಲಸ ಮಾಡಿದ್ದ' ಎಂದು ಹೇಳಿದರು.