ಕಾಸರಗೋಡು :ಉದ್ಯೋಗ, ಕೌಶಲ್ಯ ಮತ್ತು ಶಿಕ್ಷಣಕ್ಕೇ ಸಮಾನ ಪ್ರಾಧಾನ್ಯತೆಯನ್ನು ನೀಡುವ
ಕಾಸರಗೋಡು ಜಿಲ್ಲಾ ಪಂಚಾಯತ್ ನ 'ದರ್ಪಣಂ' ಯೋಜನೆಯು ಶ್ರೀ ನಾರಾಯಣಗುರು ಮುಕ್ತ
ವಿಶ್ವವಿದ್ಯಾನಿಲಯದ ಪ್ರಾಯೋಗಿಕ ಯೋಜನೆಯಾಗಿದೆ ಎಂದು ಶ್ರೀ ನಾರಾಯಣಗುರು ಮುಕ್ತ
ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಮುಬಾರಕ್ ಪಾಷಾ ಹೇಳಿದರು. ಕಾಸರಗೋಡಿನ ಜಿಲ್ಲಾ
ಪಂಚಾಯತ್ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣ ಮಾಡುತ್ತಿದ್ದರು. ಈಗ
ಬೇಕಾಗಿರುವುದು ಉದ್ಯಮಶೀಲತೆಯ ಮೇಳಗಳೇ ಹೊರತು ಉದ್ಯೋಗ ಮೇಳಗಳಲ್ಲ. ಸಣ್ಣ ಗುಂಪುಗಳಲ್ಲಿ
ಉತ್ತಮ ಉದ್ಯಮಗಳನ್ನು ಪ್ರಾರಂಭಿಸಲು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ
ಸಕ್ರಿಯಗೊಳಿಸಬೇಕು.
ಉನ್ನತ ಶಿಕ್ಷಣ ಪಡೆದವರು ಮಾತ್ರವಲ್ಲದೆ, ವಿದ್ಯಾಭ್ಯಾಸವನ್ನು
ಮಧ್ಯದಲ್ಲಿಯೇ ಕೈಬಿಡಬೇಕಾಗಿ ಮಹಿಳೆಯರನ್ನು ಸೇರಿಸಿ ಉದ್ಯಮಶೀಲತೆಯನ್ನು
ಅಭಿವೃದ್ಧಿಪಡಿಸಲು ಸಾಧ್ಯವಾಗುವಂತಹ ಶಿಕ್ಷಣವನ್ನು ನೀಡುವುದು ವಿಶ್ವವಿದ್ಯಾಲಯದ
ಉದ್ದೇಶವಾಗಿದೆ. ಸ್ಥಳೀಯ ಆಡಳಿತ ಸಂಸ್ಥೆಗಳ ಸಹಯೋಗದಲ್ಲಿ ಇದನ್ನು
ಜಾರಿಗೊಳಿಸಲಾಗುತ್ತಿದೆ. ಕಾಸರಗೋಡಿನ ಸಂಪನ್ಮೂಲಗಳನ್ನು ವಿಶ್ವ ಮಾರುಕಟ್ಟೆಗೆ ತರಲು
ಸಹಾಯ ವಾಗುವ ರೀತಿಯ ಕೌಶಲ್ಯಾಭಿವೃದ್ಧಿಗೆ, ಉದ್ಯೋಗ ಸೃಷ್ಟಿಸಲು, ಶಿಕ್ಷಣ ನೀಡಲು ಇರುವ
ಚಟುವಟಿಕೆಯನ್ನು 'ದರ್ಪಣ' ದ ಮೂಲಕ ಸಾಕಾರಗೊಳಿಸಲಾಗುವುದು. ನಾಲ್ಕು ವರ್ಷಗಳ ಕೋರ್ಸ್
ನ್ನು ಜಾರಿಗೊಳಿಸಲಾಗುವುದು. ಕಾಸರಗೋಡು ಜಿಲ್ಲಾ ಪಂಚಾಯತ್ 'ದರ್ಪಣಂ' ಯೋಜನೆ
ಮಾದರಿಯಾಗಿದೆ. ಶ್ರೀ ನಾರಾಯಣಗುರು ಮುಕ್ತ ವಿಶ್ವವಿದ್ಯಾನಿಲಯದ ಕಾಸರಗೋಡು
ಜಿಲ್ಲೆಯಲ್ಲಿ ಪ್ರಾದೇಶಿಕ ಕೇಂದ್ರ ಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ
ತರಲಾಗುವುದು ಎಂದು ತಿಳಿಸಿದರು.