ಕಾಸರಗೋಡು: ಲೇಖಕಿ ವಿಜಯಲಕ್ಷ್ಮಿ ಶ್ಯಾನುಭಾಗ್ ಅವರ 'ಆವಿಯಾಗದ ಇಬ್ಬನಿ' ಒಂದು ಅಪರೂಪದ ಚಿಂತನಾ ಕೃತಿಯಾಗಿದ್ದು, ಚಿಂತನ ಮಂಥನವಾಗಿ-ಮೂರ್ತ ಅಮೂರ್ತವಾಗಿ ಹೃದಯದ ಕದ ತಟ್ಟುವ ಕೃತಿಯಾಗಿ ಹೊರಹೊಮ್ಮಿದೆ ಎಂದು ಖ್ಯಾತ ಸಾಹಿತಿ ಅಂಶುಮಾಲಿ ಹೇಳಿದರು.
ಅವರು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಕಾಸರಗೋಡಿನ ಮಥುರಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 'ಆವಿಯಾಗದ ಇಬ್ಬನಿ' ಕೃತಿ ಬಿಡುಗಡೆ ಮತ್ತು ಸಾಹಿತ್ಯ ಸಲ್ಲಾಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಾಹಿತಿ,ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತ ಕುಮಾರ ಪೆರ್ಲ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ವಿಜಯಲಕ್ಷ್ಮಿ ಅವರು ಉತ್ತಮ ಕವಯತ್ರಿಯೂ ಆಗಿರುವುದರಿಂದ ಈ ಚಿಂತನಾ ಲೇಖನಗಳ ಸಂಕಲನದ ಗದ್ಯಬರಹಗಳು ಕಾವ್ಯಸೌಂದರ್ಯದಿಂದ ವಿಜೃಂಭಿಸುವಂತಾಗಿದೆ ಎಂದು ತಿಳಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ,ಕವಯಿತ್ರಿ ಕವಿತಾ ಕೂಡ್ಲು ಕೃತಿ ಪರಿಚಯ ಮಾಡಿದರು. ಲೇಖಕಿ ವಿಜಯಲಕ್ಷ್ಮಿ ಶ್ಯಾನುಭಾಗ್, ಚಿತ್ರನಟ,ರಂಗನಿರ್ದೇಶಕ ಕಾಸರಗೋಡು ಚಿನ್ನಾ, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ, ಡಾ. ಶಾರ್ವರಿ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ನಡೆದ ಸಾಹಿತ್ಯ ಸಲ್ಲಾಪದಲ್ಲಿ ಸಾಹಿತಿಗಳಾದ ಡಾ.ಪ್ರಮೀಳ ಮಾಧವ, ಡಾ.ಕಮಲಾಕ್ಷ.ಕೆ, ಟಿ.ಎ. ಎನ್ ಖಂಡಿಗೆ, ಡಾ.ಕೊಳ್ಚಪ್ಪೆ ಗೋವಿಂದ ಭಟ್ ಪಾಲ್ಗೊಂಡರು. ವಿದುಷಿ ಶ್ರೀಮತಿ ರಾಧ ಮುರಳೀಧರ್ ಪ್ರಾರ್ಥನೆ ಹಾಡಿದರು. ಲೇಖಕರ ಸಂಘದ ಕಾರ್ಯಾಧ್ಯಕ್ಷ ಪೆÇ್ರ. ಪಿ.ಎನ್ ಮೂಡಿತ್ತಾಯ ಸ್ವಾಗತಿಸಿದರು. ದಿವ್ಯಾಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ವಂದಿಸಿದರು.
ಲೇಖಕರ ಸಂಘದಿಂದ 'ಆವಿಯಾಗದ ಇಬ್ಬನಿ' ಕೃತಿ ಬಿಡುಗಡೆ, ಸಾಹಿತ್ಯ ಸಲ್ಲಾಪ ಕಾರ್ಯಕ್ರಮ
0
ಫೆಬ್ರವರಿ 20, 2023
Tags