ಮುಳ್ಳೇರಿಯ: ಪೈಕಾನ ವಡವಲ ಶ್ರೀ ಮಹಾದೇವ ಮಹಾವಿಷ್ಣು ಸನ್ನಿಧಿಯಲ್ಲಿ ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ಸಭೆ ನಡೆಯಿತು.
ಬಂಬ್ರಾಣ ನಾರಾಯಣ ಪೂಜಾರಿ ಕೊಟ್ಯದ ಮನೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವಸ್ತಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಂಗ್ರಹಿಸಿದ ನಿಧಿ ಹಸ್ತಾಂತರಿಸಿದರು. ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ ಪ್ರಭಾಕರ ನಾಯರ್ ಧಾರ್ಮಿಕ ಭಾಷಣ ಮಾಡಿ, ಶಿವರಾತ್ರಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಮಹಾದೇವನು ಲೋಕದ ಸಂರಕ್ಷಣೆಗಾಗಿ ವಿಷವನ್ನೇ ಕುಡಿದ ಸಂದರ್ಭವನ್ನು ವಿವರಿಸಿ, ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. ಗಣೇಶ್ ವತ್ಸ, ನಾರಾಯಣ ಭಟ್ ಮುಂಡೋಳು ಮೂಲೆ,ಜಗದೀಶ್ ರಾವ್ ಪೈಕಾನ, ಎ ಜಿ ಶರ್ಮಾ, ರಾಮಚಂದ್ರ ಗೌರಿಯಡ್ಕ ಉಪಸ್ಥಿತರಿದ್ದರು. ಬಾಲಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾರ್ಥನೆ ಹಾಡಿದರು. ಎಸ್ ಎನ್ ಪ್ರಸಾದ್ ಸ್ವಾಗತಿಸಿದರು. ಗೋಪಾಲಕೃಷ್ಣ ಮುಂಡೋಳು ಮೂಲೆ ವಂದಿಸಿದರು.