ಪೆರ್ಲ: ಪಡ್ರೆ ಗ್ರಾಮದ ವಾಣಿನಗರದಲ್ಲಿ ಪೋಕ್ಸೊ ಪ್ರಕರಣದ ಆರೋಪಿಯಾದ ಯುವಕನೋರ್ವನ ಮೃತದೇಹ ಮನೆ ಸಮೀಪದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಇಲ್ಲಿನ ನೆಕ್ಕರೆಮಜಲು ರಾಮನಾಯ್ಕ ಎಂಬವರ ಪುತ್ರ ಖಾಸಗೀ ಬಸ್ ನಿರ್ವಾಹಕನಾಗಿದ್ದ ನಾಗರಾಜ್ (32) ಎಂಬಾತ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಇವರ ಮನೆಯಲ್ಲಿ ರವಿವಾರ ರಾತ್ರಿ ದೈವಕ್ಕೆ ಬಡಿಸುವ ಅಗೇಲು ಕಾರ್ಯ ಕಾರ್ಯ ನಡೆದಿದ್ದು ಮನೆಗೆ ಆಗಮಿಸಿದ ಬಂಧುಗಳು ಬೆಳಗ್ಗೆ ಹಿಂತಿರುಗಿದ್ದರು. ಈ ವೇಳೆ ನಾಗರಾಜ್ ನನ್ನು ಕಾಣದಿದ್ದಾಗ ಮನೆಯವರು ಹುಡುಕಿದ್ದು ಮನೆ ಸಮೀಪ ಮೃತದೇಹ ಪತ್ತೆಯಾಗಿತ್ತು.ಪ್ರಕರಣ ಬದಿಯಡ್ಕ ಪೆÇೀಲಿಸ್ ಠಾಣೆಯಲ್ಲಿ ದಾಖಲಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿದ್ದ. ವರ್ಷಗಳ ಹಿಂದೆ ಮನೆ ಸಮೀಪದ ಬಾಲಕನೊಡನೆ ಅನುಚಿತವಾಗಿ ವರ್ತಿಸಿದನೆಂಬ ಆರೋಪದಡಿ ಈತನ ವಿರುದ್ಧ ಫೆÇೀಕ್ಸೊ ಕಾಯ್ದೆಯಡಿ ಕೇಸು ದಾಖಲಿಸಲಾಗಿದ್ದು ಇದು ವಿಚಾರಣೆಯ ಕೊನೆಯ ಹಂತದಲ್ಲಿರುವುದಾಗಿದ್ದು ಈ ನಡುವೆ ಈತ ಆತ್ಮಹತ್ಯೆಗೆ ಶರಣಾಗಿರುವುದಾಗಿ ಮನೆಯವರು ತಿಳಿಸಿದ್ದಾರೆ.
ಮೃತ ನಾಗರಾಜ್ ನ ತಾಯಿ ಲಕ್ಷ್ಮಿ ಮೂರು ವರ್ಷಗಳ ಹಿಂದೆ ತೀರಿಕೊಂಡಿದ್ದು ಹಿರಿಯ ಸಹೋದರ ಜಯಪ್ರಕಾಶ್ ವಿವಾಹಿತರಾಗಿ ಬೇರೆಡೆ ನೆಲೆಸಿದ್ದಾರೆ. ಸಹೋದರಿ ರಾಜೇಶ್ವರಿಯನ್ನು ಸಾರಡ್ಕ ಸಮೀಪದ ಬೀಟಿಗದ್ದೆಗೆ ವಿವಾಹ ಮಾಡಿಕೊಡಲಾಗಿದೆ. ಮೃತ ಯುವಕ ಸ್ಥಳೀಯ ಖಾಸಗೀ ಬಸ್ ವೊಂದರಲ್ಲಿ ನಿರ್ವಾಹಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.
ವಾಣಿನಗರದಲ್ಲಿ ಪೋಕ್ಸೊ ಪ್ರಕರಣದ ಆರೋಪಿ ನೇಣು ಬಿಗಿದು ಆತ್ಮಹತ್ಯೆ
0
ಫೆಬ್ರವರಿ 27, 2023
Tags