HEALTH TIPS

ನಾಗಾ ಶಾಂತಿ ಮಾತುಕತೆ ನಡೆಯುತ್ತಿದೆ,ಪ್ರಧಾನಿ ಉಪಕ್ರಮ ಫಲ ನೀಡಲಿದೆ: ಅಮಿತ್ ಶಾ ವಿಶ್ವಾಸ

Top Post Ad

Click to join Samarasasudhi Official Whatsapp Group

Qries

 

               ತುಯೆನ್ಸಾಂಗ್: ನಾಗಾ ಶಾಂತಿ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಮಂಗಳವಾರ ಇಲ್ಲಿ ಒತ್ತಿ ಹೇಳಿದ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ಅವರು,ರಾಜ್ಯದಲ್ಲಿ ಶಾಶ್ವತ ಶಾಂತಿ ನೆಲೆಸುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಕೈಗೊಂಡಿರುವ ಉಪಕ್ರಮವು ಫಲ ನೀಡುತ್ತದೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

                        ಇಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು,ಪೂರ್ವ ನಾಗಾಲ್ಯಾಂಡ್ನ ಅಭಿವೃದ್ಧಿ ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ ಮತ್ತು ವಿಧಾನಸಭಾ ಚುನಾವಣೆಯ ಬಳಿಕ ಅವುಗಳನ್ನು ಬಗೆಹರಿಸಲಾಗುವುದು ಎಂದರು.

                ಈಶಾನ್ಯ ಭಾರತದಲ್ಲಿ ಬಂಡಾಯವು ಕ್ಷೀಣಿಸುತ್ತಿದೆ ಎಂದು ಪ್ರತಿಪಾದಿಸಿದ ಶಾ,ಬಿಜೆಪಿ ಆಡಳಿತದಲ್ಲಿ ಈ ಪ್ರದೇಶದಲ್ಲಿಯ ಹಿಂಸಾತ್ಮಕ ಘಟನೆಗಳಲ್ಲಿ ಶೇ.70ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದರು.

                      ಈಶಾನ್ಯದಲ್ಲಿ ಭದ್ರತಾ ಪಡೆಗಳ ಸಾವುಗಳು ಶೇ.60ರಷ್ಟು ಮತ್ತು ನಾಗರಿಕರ ಸಾವುಗಳ ಪ್ರಕರಣಗಳು ಶೇ.83ರಷ್ಟು ತಗ್ಗಿವೆ ಎಂದೂ ಶಾ ಹೇಳಿದರು.

                       ಬಿಜೆಪಿ ಸರಕಾರವು ನಾಗಾಲ್ಯಾಂಡ್ನ ಹೆಚ್ಚಿನ ಭಾಗಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂದೆಗೆದುಕೊಂಡಿದೆ ಎಂದ ಶಾ,ಮುಂದಿನ 3-4 ವರ್ಷಗಳಲ್ಲಿ ನಾಗಾಲ್ಯಾಂಡ್ನಾದ್ಯಂತ ಕಾಯ್ದೆಯನ್ನು ಹಿಂದೆಗೆದುಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದರು.

                    60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಗೆ ಫೆ.27ರಂದು ಚುನಾವಣೆ ನಡೆಯಲಿದ್ದು,ಮಾ.2ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries