ಕಾಸರಗೋಡು: ಮುಖ್ಯಮಂತ್ರಿ ವಾಹನದ ಎದುರು ಕರಿ ಪತಾಕೆ ಮೂಲಕ ಧಾವಿಸಿ ಪ್ರತಿಭಟಿಸಿದ ಯೂತ್ ಕಾಂಗ್ರೆಸ್ ಮಂಡಲ ಸಮಿತಿ ಅಧ್ಯಕ್ಷ ರಾಗೇಶ್ ಕರಿಚ್ಚೇರಿ ಮೇಲೆ ಮುಖ್ಯಮಂತ್ರಿ ಭದ್ರತಾ ಪಡೆ ಪೊಲೀಸರು ನಡೆಸಿದ ಲಾಟಿ ಪ್ರಹಾರದಿಂದ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಬಳೆಯಲ್ಲಿ ಸೋಮನವಾರ ಸಂಜೆ ಕಾರ್ಯಕ್ರಮ ಮುಗಿಸಿ ವಾಪಸಾಗುತ್ತಿದ್ದ ಸಂದರ್ಭ ಪೊಯಿನಾಚಿಯಲ್ಲಿ ಸಿಎಂ ಪಿಣರಾಯಿ ವಿಜಯನ್ ಅವರಿದ್ದ ವಾಹನ ಹಾಗೂ ಬೆಂಗಾವಲು ವಾಹನದ ಎದುರು ಧಾವಿಸಿ ಕರಿಪತಾಕೆ ಬೀಸಿದ್ದರು. ಈ ಸಂದಬ್ ಬೆಂಗಾವಲು ವಾಹನದಲ್ಲಿದ್ದ ಪೊಲೀಸರು ಬಲವಾಗಿ ಲಾಟಿಪ್ರಹಾರ ನಡೆಸಿದ ಪರಿಣಾಮ ರಾಗೇಶ್ ತಲೆಗೆ ಗಂಭೀರ ಗಾಯಗಳುಂಟಾಗಿತ್ತು. ಮುಖ್ಯಮಂತ್ರಿ ವಾಹನದ ಎದುರು ಕರಿಪತಕೆ ಬೀಸಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಪಿ ಪರದಿಪನ್ ಹಾಗೂ ಮಂಡಲ ಸಮಿತಿ ಅಧ್ಯಕ್ಷ ರಾಹುಲ್ ಆರ್. ಅವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕರಿಪತಾಕೆ ಪ್ರದರ್ಶನ: ಪೊಲೀಸ್ ಲಾಟಿ ಏಟಿನಿಂದ ಯೂತ್ ಕಾಂಗ್ರೆಸ್ ಮುಖಂಡಗೆ ಗಾಯ
0
ಫೆಬ್ರವರಿ 21, 2023
Tags