ತಿರುವನಂತಪುರಂ: ವನ್ಯಜೀವಿ ಅಭಯಾರಣ್ಯಗಳ ಆವರಣ ವ್ಯಾಪ್ತಿಯಲ್ಲಿ ಎಮ್ಮೆಗಳ ಸಾಕಾಣೆ-ಸಂಚಾರ ನಿಷೇಧಿಸುವ ಸಾಧ್ಯತೆ ಇದೆ. ಹುಲಿ, ಇತರ ಕಾಡುಪ್ರಾಣಿಗಳು ನಾಡಿನೊಳಗೆ ನುಗ್ಗುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.
ಸಾಮಾನ್ಯವಾಗಿ ಎಮ್ಮೆಗಳನ್ನು ಸಾಕಲು ಅರಣ್ಯವಾಸಿಗಳಿಗೆ ವರ್ಗಾಯಿಸುತ್ತಾರೆ. ಬೇರೆ ರಾಜ್ಯಗಳಿಂದ ಎಮ್ಮೆಗಳನ್ನು ತರಲಾಗುತ್ತದೆ.
ಅರಣ್ಯ ಪ್ರದೇಶಗಳಿಗೆ ನುಗ್ಗಿರುವ ಎಮ್ಮೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ಈ ಎಮ್ಮೆಗಳು ತಮ್ಮವು ಎಂದು ಸಾಬೀತುಪಡಿಸಲು ಮಾಲೀಕರಿಗೆ ಒಂದು ವಾರ ಕಾಲಾವಕಾಶ ನೀಡಲಾಗುವುದು. ದಂಡ ಪಾವತಿಸಿದ ಮೇಲೆ ಎಮ್ಮೆಗಳನ್ನು ಮಾಲೀಕರಿಗೆ ನೀಡಲಾಗುವುದು. ಮಾಲೀಕರು ಬಾರದಿದ್ದಲ್ಲಿ ಎಮ್ಮೆಗಳನ್ನು ಹರಾಜು ಮೂಲಕ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಇದರಿಂದ ಜಾನುವಾರು ಸಾಕಣೆಯಿಂದ ಜೀವನ ನಡೆಸುತ್ತಿರುವ ರೈತರಿಗೆ ತೊಂದರೆಯಾಗದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಈ ನಿರ್ಧಾರದ ಕುರಿತು ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಎಕೆ ಶಶೀಂದ್ರನ್ ಮುಖ್ಯ ವನ್ಯಜೀವಿ ವಾರ್ಡನ್ ಗಂಗಾ ಸಿಂಗ್ ಅವರಿಗೆ ಸೂಚಿಸಿದ್ದಾರೆ. ಅರಣ್ಯ ಇಲಾಖೆಯ ವರದಿ ಪ್ರಕಾರ ವಯನಾಡು ವನ್ಯಜೀವಿ ಅಭಯಾರಣ್ಯ ಒಂದರಲ್ಲೇ ಸುಮಾರು 25,000 ಎಮ್ಮೆಗಳಿವೆ.
ಎಮ್ಮೆಗಳೇ ಹೊರ ನಡೆಯಿರಿ: ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಎಮ್ಮೆ ಸಾಕಾಣೆಗೆ ನಿಷೇಧ
0
ಫೆಬ್ರವರಿ 20, 2023