ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಲ್ಲಿ (ಎಫ್‍ಹೆಚ್‍ಸಿ) ರೋಗಿಗಳಿಗೆ ಅನುಕೂಲಕರವಾಗಿ ಸಂಜೆ ಒಪಿ ಕಾರ್ಯಚರಣಾ ವಿಭಾಗದ ಉದ್ಘಾಟನೆ ಫೆ.16 ರಂದು ಜರಗಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಜರಗುವ ಕಾರ್ಯಕ್ರಮದಲ್ಲಿ ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಲಿದ್ದಾರೆ. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆವಹಿಸುವರು.ಜಿಲ್ಲಾ ಪಂ.ಬ್ಲಾಕ್ ಹಾಗೂ ಗ್ರಾ.ಪಂ.ಸದಸ್ಯರು ಭಾಗವಹಿಸುವರು.
ನೂತನ ಒಪಿ ವಿಭಾಗದ ಕಾರ್ಯರಂಭದಿಂದ ರೋಗಿಗಳಿಗೆ ಮಧ್ಯಾಹ್ನ ಬಳಿಕ ಸಂಜೆಯ ವೇಳೆ ವೈದ್ಯರು, ಪ್ಯಾರಾ ಮೆಡಿಕಲ್ ಸೇವೆ ಲಭ್ಯವಿದ್ದು, ಸಂಜೆವರೆಗೆ ಒಪಿ ಸೇವೆ ಆರಂಭವಾದಾಗ ತಗಲುವ ಹೆಚ್ಚುವರಿ ವೆಚ್ಚವನ್ನು ಎಣ್ಮಕಜೆ ಗ್ರಾಮ ಪಂಚಾಯಿತಿ ಭರಿಸಲಿದೆ. ಎಂಡೋಸಲ್ಫಾನ್ ಪೀಡಿತ ಹಾಗೂ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಈ ಸಂಜೆ ಒಪಿ ಕಾರ್ಯಚರಣೆಯು ಉಪಯೋಗಕರವಾಗಲಿದೆ. ಕೇರಳ ಸರಕಾರದ ಆದ್ರರ್ಂ ಯೋಜನೆಯ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ನಾಳೆ ಪೆರ್ಲ ಎಫ್ .ಎಚ್. ಸಿ.ಯಲ್ಲಿ ಸಂಜೆ ಒಪಿ ವಿಭಾಗದ ಉದ್ಘಾಟನೆ
0
ಫೆಬ್ರವರಿ 15, 2023
Tags