ಕಾಸರಗೋಡು: ಕೇರಳ ಸಂಸ್ಕೃತ ಶಿಕ್ಷಕರ ಒಕ್ಕೂಟ(ಕೆಎಸ್‍ಟಿಎಫ್)45ನೇ ಜಿಲ್ಲಾ ಸಮ್ಮೇಳನ ಕಾಸರಗೋಡು ಬಿ.ಇ.ಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಶಾಸಕ ಎನ್.ಎ.ನೆಲ್ಲಿಕುನ್ನು ಸಮ್ಮೇಳನ ಉದ್ಘಾಟಿಸಿದರು. ಸಂಘಟನೆ ಜಿಲ್ಲಾ ಅಧ್ಯಕ್ಷ ಪದ್ಮಕುಮಾರ್ ಟಿ.ಪಿ.ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಿರಿಯ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಸಂಸ್ಕøತ ಶಿಕ್ಷಣ ಲಭ್ಯವಾಗುವಂತೆ ಮಾಡಬೇಕು, ಈ ನಿಟ್ಟಿನಲ್ಲಿ ಸಂಸ್ಕೃತ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಮಂಜೂರು ಮಾಡುವಂತೆ ಸಭೆಯು ಸರ್ಕಾರಕ್ಕೆ ಮನವಿ ಮಾಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಪಿ.ಸನಲ್ ಚಂದ್ರನ್ ಮುಖ್ಯ ಭಾಷಣ ಮಾಡಿದರು. ಸಂಸ್ಕೃತ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದ ಶ್ರೀವಿಘ್ನೇಶ್ ಶರ್ಮ ಮತ್ತು ರಾಜ್ಯಮಟ್ಟದಲ್ಲಿ ನಡೆದ ಶ್ರಾವಣಿಕಂ ಸ್ಪರ್ಧೆಯಲ್ಲಿ ವಿಜೇತೆಯಾದ ಸೃಷ್ಟಿ ಶೆಟ್ಟಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಅರುಣ್ ಕುಮಾರ್, ಡಾ.ಸುನೀಲ್ ಕುಮಾರ್,ಹರಿಕೃಷ್ಣನ್ ಕೆ.ಟಿ. ವೆಂಕಟಕೃಷ್ಣ ಭಟ್, ಶೈಮ .ಕೆ.ಸಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಧು.ಕೆ ಸ್ವಾಗತಿಸಿದರು. ಹರಿ ಕುಮಾರ್ ಕೆ.ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೃಷ್ಣಪ್ರಸಾದ.ಕೆ ವಂದಿಸಿದರು.
ಈ ಸಂದರ್ಭ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪದ್ಮಕುಮಾರ್ ಟಿ.ಪಿ ಜಿಲ್ಲಾ ಸಮಿತಿ ಅಧ್ಯಕ್ಷ, ಮಧು ಕೆ ಕಾರ್ಯದರ್ಶಿ, ಕೆಡಿಎಸ್‍ಟಿಎಫ್ ಅಧ್ಯಕ್ಷರನ್ನಾಗಿ ಕೆ. ಮನೋಜ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ನಿಲಮನ ಉಮಾ ಅವರನ್ನು ಆಯ್ಕೆ ಮಾಡಲಾಯಿತು.
ಎಲ್.ಪಿ ತರಗತಿಯಿಂದಲೇ ಸಂಸ್ಕøತ ಶಿಕ್ಷಣ-ಸಂಸ್ಕøತ ಶಿಕ್ಷಕರ ಸಮ್ಮೇಳನ ಒತ್ತಾಯ
0
ಫೆಬ್ರವರಿ 12, 2023