ಪೆರ್ಲ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ಕಾಸರಗೋಡು ಇದರ ಮಾರ್ಗದರ್ಶನದಲ್ಲಿ ಜ್ಞಾನವಿಕಾಸ ಕೇಂದ್ರ ಕಾಸರಗೋಡು, ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟ ಬೆದ್ರಂಪಳ್ಳ, ಪೆರ್ಲ ವಲಯಗಳ ಸಹಕಾರದಲ್ಲಿ ಕಾಸರಗೋಡು ತಾಲೂಕು ಮಟ್ಡದ ಮಹಿಳಾ ವಿಚಾರಗೋಷ್ಠಿ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮ ಪೆರ್ಲ ಇಡಿಯಡ್ಕದ ಉಳ್ಳಾಲ್ತಿ ಸಭಾಂಗಣದಲ್ಲಿ ಜರಗಿತು. ಇದರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಇಡಿಯಡ್ಕ ಕ್ಷೇತ್ರ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಮುಖ್ಯೋಪಾಧ್ಯಾಯ ಸದಾನಂದ ಶೆಟ್ಟಿ ಕುದ್ವ ಉದ್ಘಾಟಿಸಿದರು. ಪ್ರಗತಿಬಂಧು ಒಕ್ಕೂಟದ ಪೆರ್ಲ ವಲಯ ಅಧ್ಯಕ್ಷೆ ಉμÁ ಅಧ್ಯಕ್ಷತೆ ವಹಿಸಿದ್ದರು. ಧ,ಗ್ರಾ,ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜ್ಞಾನವಿಕಾಸದ ಯೋಜನಾಧಿಕಾರಿ ಸಂಗೀತಾ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬಳಿಕ ಜರಗಿದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಹಿಳಾಪರ ಕಾನೂನು ಮತ್ತು ಸಲಹೆಯ ಬಗ್ಗೆ ನ್ಯಾಯವಾದಿ ಅಕ್ಷತಾ ಎಂ.ಎ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಎಂಬ ವಿಷಯದ ಬಗ್ಗೆ ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ವಿಚಾರ ಮಂಡಿಸಿದರು.
ಕಾರ್ಯಕ್ರಮದಂಗವಾಗಿ ಜ್ಞಾನವಿಕಾಸ ಕೇಂದ್ರದ ಸದಸ್ಯೆಯರಿಗೆ ರಂಗೋಲಿ, ಪುಷ್ಪಗುಚ್ಛ ತಯಾರಿ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಜರಗಿತು. ಕು.ರೇವತಿ ವಾಣಿನಗರ ಪ್ರಾರ್ಥನೆಗೈದರು. ಧ.ಗ್ರಾ.ಯೋಜನಾಧಿಕಾರಿ ಮುಖೇಶ್ ಗಟ್ಟಿ ಸ್ವಾಗತಿಸಿ, ಜ್ಞಾನವಿಕಾಸ ತಾಲೂಕು ಸಮನ್ವಯಾಧಿಕಾರಿ ಸೌಮ್ಯ ವಂದಿಸಿದರು. ಸ್ವಸಹಾಯ ಸಂಘಗಳ ಮೇಲ್ವಿಚಾರಕ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ವಲಯ ಸೇವಾ ಪ್ರತಿನಿಧಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು. ಕೇಂದ್ರದ 4 ಸದಸ್ಯರು ಅನಿಸಿಕೆ ವ್ಯಕ್ತಪಡಿಸಿದರು.