ಕಾಸರಗೋಡು: ಜಿಲ್ಲೆಯ ವಿವಿಧ ಶಿವಾಲಯಗಳಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಫೆ. 18ರಂದು ಜರುಗಲಿದೆ. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಗುಡ್ಡೆ ಶ್ರೀ ಮಹಾದೇವ ದೇವಸ್ಥಾನ, ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನ, ಪುತ್ತಿಗೆ ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಕಿದೂರು ಶ್ರೀ ಮಹಾದೇವ ದೇವಸ್ಥಾನ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ, ಬಾಕ್ರಬೈಲು ಶ್ರೀ ಸೂರ್ಯೇಶ್ವರ ದೇವಸ್ಥಾನ, ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ವಿವಿಧೆಡೆ ಭಜನೆ, ಅಭಿಷೇಕ ಸೇರಿದಂತೆ ಕಾರ್ಯಕ್ರಮ ಜರುಗಲಿದೆ.
ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀದೇವರ ಬಲಿ, ಭಜನೆ, ಧಾರ್ಮಿಖ ಕಾರ್ಯಕ್ರಮ ಜರುಗಲಿದೆ. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಾಹ್ನ ಶ್ರೀದೇವರಿಗೆ ಶತರುದ್ರಾಭಿಷೇಕ, ಬಲಿವಾಡು ಕೂಟ, ಸಂಜೆ 38ನೇ ವರ್ಷದ ಭಜನಾ ವಾರ್ಷಿಕೋತ್ಸವ, ಶಿವರಾತ್ರಿ ಭಜನೆ ಜರುಗಲಿರುವುದು.
ಕಾಸರಗೋಡಿನ ಶಿವಾಲಯಗಳಲ್ಲಿ ಶಿವರಾತ್ರಿ ಕಾರ್ಯಕ್ರಮ
0
ಫೆಬ್ರವರಿ 17, 2023
Tags