ಸಮರಸ ಚಿತ್ರಸುದ್ದಿ: ಕಾಸರಗೋಡು ನಗರ ಸಭಾಂಗಣದಲ್ಲಿ ಆರಂಭಗೊಂಡ ಕೇರಳ ರಾಜ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನ ಹಾಗೂ ಸಂಘಟನೆ ರಜತಮಹೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾಸರಗೋಡು ಬೀರಂತಬೈಲಿನ ಕನ್ನಡ ಮಾಧ್ಯಮ ಅಧ್ಯಾಪಕರ ಭವನದಿಂದ ನಗರಸಭಾಂಗಣ ವರೆಗೆ ಅಧ್ಯಾಪಕರನ್ನೊಳಗೊಂಡ ಮೆರವಣಿಗೆ ನಡೆಯಿತು. ಆಕರ್ಷಕ ಮುತ್ತುಕೊಡೆ, ಸಿಂಗಾರಿ ಚೆಂಡೆಮೇಳದೊಂದಿಗೆ ಮೆರವಣಿಗೆ ಕಾಸರಗೋಡು ನಗರದ ಮೂಲಕ ಹಾದು ಸಮ್ಮೇಳನ ನಗರ ತಲುಪಿತು.
ಅಧ್ಯಾಪಕ ಸಮ್ಮೇಳನ: ಮೆರವಣಿಗೆ
0
ಫೆಬ್ರವರಿ 25, 2023