ಕಣ್ಣೂರು: ಶಾರ್ಟ್ ಸಕ್ರ್ಯೂಟ್ ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಗರ್ಭಿಣಿ ಸೇರಿದಂತೆ ಇಬ್ಬರು ಸಾವನ್ನಪ್ಪಲು ಕಾರಣ ಎಂದು ತಜ್ಞರ ವರದಿ ದೃಢಪಡಿಸಿದೆ.
ಕಾರಿನಲ್ಲಿದ್ದ ಸುಗಂಧ ದ್ರವ್ಯ ಮತ್ತು ಸ್ಯಾನಿಟೈಸರ್‍ನಿಂದ ಬೆಂಕಿ ಹೊತ್ತಿಕೊಂಡಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ. ಕಣ್ಣೂರು ಆರ್‍ಟಿಒ ನೇತೃತ್ವದ ತನಿಖಾ ತಂಡ ಅಪಘಾತದ ವರದಿಯನ್ನು ಸಿದ್ಧಪಡಿಸಿದೆ.
ಕಾರಿನ ಡ್ಯಾಶ್‍ಬೋರ್ಡ್‍ನಿಂದ ಬೆಂಕಿ ಕಾಣಿಸಿಕೊಂಡಿರುವುದು ಮೊದಲ ತಪಾಸಣೆಯಲ್ಲಿ ಕಂಡುಬಂದಿದೆ. ಅಷ್ಟರಲ್ಲಿ ಬೆಂಕಿ ಬಾನೆಟ್ ಅಥವಾ ಪೆಟ್ರೋಲ್ ಟ್ಯಾಂಕ್‍ಗೆ ವ್ಯಾಪಿಸಿಲ್ಲ. ಬೆಂಕಿ ಹೊತ್ತಿಕೊಂಡ ಕಾರಿನಲ್ಲಿ ಹೆಚ್ಚುವರಿಯಾಗಿ ಸ್ಪೀಕರ್‍ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಜಿತ್ ಮತ್ತು ರಿಷಾ ಸಾವಿಗೆ ಸುಟ್ಟ ಗಾಯಗಳೇ ಕಾರಣ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.
ಅಪಘಾತಗೊಂಡÀ ಕಾರಿನಿಂದ ವಶಪಡಿಸಿಕೊಂಡ ಇತರ ವಸ್ತುಗಳ ರಾಸಾಯನಿಕ ಪರೀಕ್ಷೆಗಳ ಫಲಿತಾಂಶಗಳಿಗಾಗಿ ತನಿಖಾ ತಂಡವು ಕಾಯುತ್ತಿದೆ. ಬುಧವಾರ ತಾಂತ್ರಿಕ ತಜ್ಞರ ತಂಡ ಕಾರನ್ನು ತಪಾಸಣೆ ನಡೆಸಿತ್ತು. ಆರ್.ಟಿ.ಒ. ಇ.ಎಸ್.ಉಣ್ಣಿಕೃಷ್ಣನ್, ಎಂವಿಐಗಳಾದ ಪಿ.ವಿ.ಬಿಜು ಮತ್ತು ಜಗನ್‍ಲಾಲ್ ತಂಡದಲ್ಲಿದ್ದರು.
ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದ ಕುಟ್ಟಿಯತ್ತೂರು ಉರುವಾಚಲದ ಕೆ.ಕೆ. ರಿμÁ (26) ಮತ್ತು ಅವರ ಪತಿ ಟಿ.ವಿ.ಪ್ರಜಿತ್ (35) ಕಾರಿಗೆ ಬೆಂಕಿತಗಲಿ ಮೃತಪಟ್ಟಿದ್ದರು. ಅಪಘಾತದ ನಂತರ ಕಾರಿನಲ್ಲಿ ಪೆಟ್ರೋಲ್ ಬಾಟಲಿಗಳನ್ನು ಇಡಲಾಗಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಾರಿನಲ್ಲಿ ಅಂತಹ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ವಿಧಿವಿಜ್ಞಾನ ಅಧಿಕಾರಿಗಳು ತಿಳಿಸಿದ್ದಾರೆ. ಕಾರಿನಲ್ಲಿ ಎರಡು ಕುಡಿಯುವ ನೀರಿನ ಬಾಟಲಿಗಳಿದ್ದವು ಎಂದು ಮೃತ ರಿμÁ ಕುಟುಂಬದವರು ತಿಳಿಸಿದ್ದಾರೆ.
ಕಾರಿಗೆ ಬೆಂಕಿ ಹತ್ತಲು ಕಾರಣ ಶಾರ್ಟ್ ಸಕ್ರ್ಯೂಟ್: ಸ್ಯಾನಿಟೈಸರ್ ಮತ್ತು ಸುಗಂಧ ದ್ರವ್ಯದಿಂದ ತೀವ್ರತೆ: ತನಿಖಾ ತಂಡ
0
ಫೆಬ್ರವರಿ 09, 2023