HEALTH TIPS

ಮಾನ್ಯದ ಸಾಂಸ್ಕøತಿಕ ಸಾರಥಿ ವಿಜಯಕುಮಾರ್ ಗೆ ಪೌರಸನ್ಮಾನ


         ಬದಿಯಡ್ಕ:  ಮಾನ್ಯ ಪರಿಸರದಲ್ಲಿ ಯಕ್ಷಗಾನ, ತಾಳಮದ್ದಳೆಗಳನ್ನು ನಿರಂತರ ಏರ್ಪಡಿಸಲು ಹೆಗಲೊಡ್ಡಿ ನಾಡಿನ ಸಾಂಸ್ಕøತಿಕ ವಾತಾವರಣಕ್ಕೆ ಮುಖ್ಯ ಕಾರಣರಾಗಿ ಸದ್ದಿಲ್ಲದೇ ಸಾಂಸ್ಕøತಿಕ ಸೇವೆಗೈಯ್ಯುವ ಹೋಟೆಲ್ ಉದ್ಯಮಿ, ಸಮಾಜ ಸೇವಕ, ಲೇಖಕ ವಿಜಯ ಕುಮಾರ್ ಮಾನ್ಯ ಅವರಿಗೆ ಮಾನ್ಯದಲ್ಲಿ ಪೌರಸನ್ಮಾನ ಸಲ್ಲಿಸಲಾಯಿತು. ಯಕ್ಷಗಾನ ಕಲಾವಿದ ಸಂತೋಷ್ ಕುಮಾರ್ ಮಾನ್ಯ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ಮಾನ್ಯದಲ್ಲಿ ಏರ್ಪಡಿಸಿದ ಪಾವಂಜೆ ಮೇಳದ ಬಯಲಾಟದ ವೇದಿಕೆಯಲ್ಲಿ ಅವರನ್ನು ಪುರಜನತೆಯ ಸಮಕ್ಷಮ ಗೌರವಿಸಲಾಯಿತು.
         ಕಾಸರಗೋಡು ತಾಲೂಕಿನಲ್ಲೇ ಮಾನ್ಯ ಪರಿಸರ ಸಾಂಸ್ಕøತಿಕ ಸದಭಿರುಚಿಗಳಿಂದ ಶ್ರೀಮಂತವಾಗಿದೆ ಮತ್ತು ಮಾನ್ಯಕ್ಕೆ ಮಾನ್ಯತೆ ಇದೆ. ಈ ನೆಲದಲ್ಲಿ ಕಳೆದ ಮೂರು ದಶಕಗಳಿಂದ ನಿರಂತರ ಯಕ್ಷಗಾನ, ಉತ್ಕøಷ್ಟ ತಾಳಮದ್ದಳೆಗಳು ಜರುಗಿ, ಸಾಂಸ್ಕøತಿಕ ವಾತಾವರಣ ನಿರ್ಮಿಸಿದ್ದರಿಂದಲೇ ನಾಡು ಸಾಂಸ್ಕøತಿಕವಾಗಿ ರೂಪುಗೊಂಡಿದೆ. ಊರಿನ ಈ ಬೆಳವಣಿಗೆಯ ಹಿಂದೆ ಇದಕ್ಕಾಗಿ ಸದ್ದಿಲ್ಲದೇ ದುಡಿದವರು ಮಾನ್ಯದ ವಿಜಯಕುಮಾರ್. ಅತ್ಯಂತ ಎಳೆಯ ಹರೆಯದಲ್ಲೇ ಸಾಂಸ್ಕøತಿಕ ಸದಭಿರುಚಿಯಿಂದ ನಾಡುಕಟ್ಟಿದ ಕಾಯಕ ಯೋಗಿಗೆ ನಾಡಜನತೆಯ ಮುಂದೆ ಗೌರವದ ಸನ್ಮಾನ ಸಲ್ಲುತ್ತಿರುವುದು ನಾಡ ಜನತೆಯ ಕೃತಜ್ಞತೆಯ ಸಂಕೇತ ಎಂದು ಅಭಿನಂದನಾ ಭಾಷಣ ಮಾಡಿದ 'ಕಣಿಪುರ' ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ, ಲೇಖಕ ಎಂ.ನಾ. ಚಂಬಲ್ತಿಮಾರ್ ನುಡಿದರು.
            ಬದಿಯಡ್ಕ ಗ್ರಾ. ಪಂ. ಸದಸ್ಯ, ಸಾಮಾಜಿಕ ಮುಂದಾಳು ಶ್ಯಾಮಪ್ರಸಾದ ಮಾನ್ಯ, ಕಲಾಪೋಷಕ ಸಂತೋಷಕುಮಾರ್ ಮಾನ್ಯ ಅತಿಥಿಗಳಾಗಿ ಪಾಲ್ಗೊಂಡು ಮಾನ್ಯದ ಸಾಂಸ್ಕøತಿಕ ವಾತಾವರಣ ನಿರ್ಮಾಣವಾಗುವಲ್ಲಿ ವಿಜಯಕುಮಾರ್ ಅವರ ಪಾತ್ರವನ್ನು ಕೊಂಡಾಡಿದರು. ಪಾವಂಜೆ ಮೇಳದ ಸಂಚಾಲಕ, ಯಕ್ಷಧ್ರುವ ಪಟ್ಲ ಫೌಂಡೇಷನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ತಾನು ಬೆಳೆಯುವುದಕ್ಕಿಂತ ತನ್ನ ಊರಿಗೆ ಸಾಂಸ್ಕøತಿಕ ಅಭಿರುಚಿ ಉಣಿಸಿ ಊರನ್ನು ಬೆಳೆಸುವುದು ಅತೀ ದೊಡ್ಡ ಕಾಯಕ. ಅಂಥ ಊರಲ್ಲಿ ಪುರಜನರ ಸನ್ಮಾನ ಪಡೆಯುವುದು ರಾಷ್ಟ್ರಪ್ರಶಸ್ತಿಯಷ್ಟೇ ದೊಡ್ಡ ಗೌರವ ಎಂದರು. ಯಕ್ಷಗಾನ ಕಲಾವಿದ, ಸಂಘಟಕ ಶಬರೀಶ್ ಮಾನ್ಯ ಉಪಸ್ಥಿತರಿದ್ದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಾವಂಜೆ ಮೇಳದ ಕಲಾವಿದರಿಂದ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries