HEALTH TIPS

ಪ್ರಾಂಶುಪಾಲರಿಂದ ಆತಂಕಕಾರಿ ಮಾಹಿತಿ ಬಹಿರಂಗ-ಸಮಗ್ರ ತನಿಖೆಗೆ ಬಿಜೆಪಿ ಆಗ್ರಹ



               ಕಾಸರಗೋಡು: ಸರ್ಕಾರಿ ಕಾಲೇಜಿನ ಕ್ಯಾಂಪಸ್‍ನಲ್ಲಿ ಮಾದಕದ್ರವ್ಯ ವ್ಯಾಪಕವಾಗಿ ಬಳಕೆಯಾಗುತ್ತಿರುವುದರ ಜತೆಗೆ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಕಾಲೇಜು ಪ್ರಾಂಶುಪಾಲೆ ಬಹಿರಂಗಪಡಿಸಿರುವ ಮಾಹಿತಿ ಬಗ್ಗೆ ಸರ್ಕಾರ ಸಮಗ್ರ ತನಿಖೆಗೆ ಮುಂದಾಗಬೇಕು ಎಂದು ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
           ಕಳೆದ ಕೆಲವು ದಿವಸಗಳಿಂದ ಕಾಲೇಜು ಪ್ರಾಂಶುಪಾಲರು ಮತ್ತು ಎಸ್‍ಎಫ್‍ಐ ಸಂಘಟನೆಗೆ ಸೇರಿದ  ವಿದ್ಯಾರ್ಥಿಗಳ ಮಧ್ಯೆ ಆಂತರಿಕ ಕಲಹವೇರ್ಪಡಲು ಕಾರಣವಾಗಿರುವ ಸೂಕ್ಷ್ಮ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಕಾಲೇಜಿನ ಇತರ ವಿದ್ಯಾರ್ಥಿಗಳ ಮೇಲೂ ಹುಟ್ಟಿಕೊಮಡಿರುವ ಸಂಶಯವನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು. ಕಾಲೇಜು ವಿದ್ಯಾರ್ಥಿನಿಯರನ್ನು ಎಸ್‍ಎಫ್‍ಐ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಅನೈತಿಕ ಹಾದಿಗೆ ತಳ್ಳುತ್ತಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಕಾಲೇಜು ಕ್ಯಾಂಪಸನ್ನು ಮಾದಕ ದ್ರವ್ಯ ವಿತರಣೆ ಕೇಂದ್ರವಾಗಿಸಿರುವುದಲ್ಲದೆ, ವಿದ್ಯಾರ್ಥಿನಿಯರನ್ನು ಹಾದಿ ತಪ್ಪಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಎಸ್‍ಎಫ್‍ಐಗೆ ಆಡಳಿತ ಪಕ್ಷದ ಸಂಪೂರ್ಣ ಬೆಂಬಲವಿರುವುದರಿಂದ ಸಂಘಟನೆ ಇಲ್ಲಿ ಯಾರ ಮಾತನ್ನೂ ಕೇಳಿಸಿಕೊಳ್ಳದ ಸ್ಥಿತಿಯಿದೆ. ಕಾಲೇಜು ಪ್ರಾಂಶುಪಾಲೆ ಬಹಿರಂಗಪಡಿಸಿರುವ ಗಂಭೀರ ಮಾಹಿತಿ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ಕಣ್ಣೂರು ವಿಶ್ವ ವಇದ್ಯಾಲಯದ ಉಪಕುಲಪತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕಾಲೇಜು ವಿದ್ಯಾರ್ಥಿಗಳ ಅನೈತಿಕ ಚಟುವಿಕೆಗಳ ಬಗ್ಗೆ ಪ್ರಶ್ನಿಸುವ ಬದಲು ಇಲ್ಲಿ ಕಾಲೇಜು ಪ್ರಾಂಶುಪಾಲೆಯನ್ನೇ ಆ ಹುದ್ದೆಯಿಂದ ತೆರವುಗೊಳಿಸಿರುವುದು ವಿದ್ಯಾರ್ಥಿ ಸಂಘಟನೆಯ ಒತ್ತಡದ ತಂತ್ರಕ್ಕೆ ಸರ್ಕಾರ ಮಣಿದಿರುವುದು ಸಾಬೀತಾಗಿದೆ. ಪ್ರಾಂಶುಪಾಲೆ ಎಂ. ರಮಾ ಅವರು ಬಹಿರಂಗಪಡಿಸಿರುವ ಆತಂಕಕಾರಿ ಮಾಹಿತಿ ಬಗ್ಗೆ ಎಡರಂಗದ ಮಿತ್ರಪಕ್ಷ ಸಿಪಿಐ ತನ್ನ ನಿಲುವು ವ್ಯಕ್ತಪಡಿಸಬೇಕಾಗಿದೆ. ಕಾಂಗ್ರೆಸ್, ಮುಸ್ಲಿಂಲೀಗ್ ಒಳಗೊಂಡ ಐಕ್ಯರಂಗವೂ ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಕಾಲೇಜು ಪ್ರಾಂಶುಪಾಲೆ ಬಹಿರಂಗಪಡಿಸಿರುವ ಮಾಹಿತಿ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ಅವರು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಮಡರಾದ ಎ. ವಏಲಾಯುಧನ್, ವಿಜಯ ಕುಮಾರ್ ರೈ ಉಪಸ್ಥಿತರಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries