ಕುಂಬಳೆ: ಮುಜುಂಗಾವು ಶ್ರೀ ಪಾರ್ಥಸಾರಥಿ ಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಭಾನುವಾರ ಆರಾಟು ಉತ್ಸವ, ದರ್ಶನಬಲಿ, ರಾಜಾಂಗಣಪ್ರಸಾದ, ಧ್ವಜಾವರೋಹಣದೊಂದಿಗೆ ಸಂಪನ್ನವಾಯಿತು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಸೋಮವಾರ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿತ್ತು. ಪ್ರತೀದಿನ ಬೆಳಗ್ಗೆ ಗಣಪತಿ ಹೋಮ, ಶ್ರೀ ಬಲಿ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀಭೂತಬಲಿ ನಡೆಯಿತು. ರಾತ್ರಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಮುಜುಂಗಾವು ಜಾತ್ರಾಮಹೋತ್ಸವ ಸಂಪನ್ನ
0
ಫೆಬ್ರವರಿ 21, 2023
Tags