ಕಾಸರಗೋಡು :ಸ್ಥಳೀಯ ಆಡಳಿತ ಸಂಸ್ಥೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಅಗತ್ಯವಾದ ಪರಿಸ್ಥಿತಿಗಳನ್ನು ಸೃಷ್ಟಿಸಬೇಕು: ಡಾ. ಜಿಜು ಪಿ ಅಲೆಕ್ಸ್
ರಾಜ್ಯ ಯೋಜನಾ ಮಂಡಳಿ ಸದಸ್ಯ ಡಾ. ಜಿಜು ಪಿ ಅಲೆಕ್ಸ್ ಮಾತನಾಡಿ, ಅತ್ಯುತ್ತಮ
ವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕೇರಳ ಆರ್ಥಿಕವಾಗಿ ಬೆಳೆಯುವ
ಪರಿಸ್ಥಿತಿಯನ್ನು ಸೃಷ್ಟಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರಧಾನ ಕಾರ್ಯವಾಗಿದೆ.
14ನೇ ಪಂಚವಾರ್ಷಿಕ ಯೋಜನೆಯ ಅಂಗವಾಗಿ ಕಾಸರಗೋಡು ಜಿಲ್ಲಾ ಪಂಚಾಯತ್ 2023- 24ನೇ ಸಾಲಿನ
ವಾರ್ಷಿಕ ಯೋಜನೆಯ ಅಭಿವೃದ್ಧಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು
ಮಾತನಾಡುತ್ತಿದ್ದರು. ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗುವ ಯೋಜನೆಗಳನ್ನು ಸೇರಿಸಿ
14ನೇ ಪಂಚವಾರ್ಷಿಕ ಯೋಜನೆಯಲ್ಲಿ ರಾಜ್ಯ ಯೋಜನಾ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು
ಸಂಪೂರ್ಣವಾಗಿ ಅಳವಡಿಸುವ ರೀತಿಯಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ವಾರ್ಷಿಕ
ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು. ರಾಜ್ಯ ಬಜೆಟ್‌ನ 42 ಶೇಕಡಾ ಯೋಜನಾ ಹಂಚಿಕೆ
ಯನ್ನು ವಿನಿಯೋಗಿಸುವುದು ಸ್ಥಳೀಯ ಸ್ವ- ಸರಕಾರ ಸಂಸ್ಥೆಗಳ ಮೂಲಕವಾಗಿದೆ. ಆದ್ದರಿಂದ,
ಕೇರಳದ ಆರ್ಥಿಕ ಅಭಿವೃದ್ಧಿಯಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಮುಖ ಪಾತ್ರವನ್ನು
ವಹಿಸುತ್ತವೆ. ರಾಜ್ಯದಲ್ಲಿನ ಆರ್ಥಿಕ ಬಿಕ್ಕಟ್ಟನ್ನು ಹೋಗಲಾಡಿಸಲು ಹೆಚ್ಚಿನ
ಉದ್ಯಮಗಳನ್ನು ಪ್ರಾರಂಭಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಸಾಮಾಜಿಕ ಮತ್ತು ಆರ್ಥಿಕ
ಭದ್ರತೆಯನ್ನು ಖಚಿತಪಡಿಸಿ ಅಭಿವೃದ್ಧಿಯನ್ನು ಸಾಧಿಸಬೇಕು. ಇದಕ್ಕೆ ಪೂರಕವಾಗಿ ಸ್ಥಳೀಯ
ಸ್ವಯಂ ಆಡಳಿತ ಸಂಸ್ಥೆಗಳು ವಾರ್ಷಿಕ ಯೋಜನೆಗಳನ್ನು ರೂಪಿಸಬೇಕು. ಉತ್ಪಾದನಾ
ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿ ಆರ್ಥಿಕವಾಗಿ ಪ್ರಗತಿ ಸಾಧಿಸುವುದು ಕೇರಳದ ಉಳಿವಿನ
ಸಮಸ್ಯೆ. ಸ್ಥಳೀಯ ಸಂಸ್ಥೆಗಳು ಇದಕ್ಕೆ ಪೂರಕವಾದ ಷರತ್ತುಗಳನ್ನು ಸಿದ್ಧಪಡಿಸಬೇಕು.
ಕಾಸರಗೋಡು ಜಿಲ್ಲಾ ಪಂಚಾಯತ್ ನ ವಾರ್ಷಿಕ ಯೋಜನೆ ಮಾದರಿಯಾಗಿದೆ. ಎಲ್ಲಾ ಸಂಸ್ಥೆಗಳಲ್ಲಿ
ಸೌರಶಕ್ತಿಯ ಬಳಕೆ, ಜಲಾನಯನ ಅಭಿವೃದ್ಧಿ ಯೋಜನೆ, ಕೈಗಾರಿಕಾ ಇನ್ಕ್ಯುಬೇಷನ್ ಕೇಂದ್ರ,
ಡಿಜಿಟಲ್ ಸಾಕ್ಷರತಾ ಯೋಜನೆ, ಕೌಶಲ್ಯ ಅಭಿವೃದ್ಧಿಗಾಗಿ ದರ್ಪಣಂ ಯೋಜನೆ ಮತ್ತು ಝೀರೋ
ವೇಸ್ಟ್ ಕಾಸರಗೋಡು ಎಂಬಿವುಗಳೆಲ್ಲಾ ಇತರ ಜಿಲ್ಲೆಗಳಿಗೆ ಮಾದರಿಯಾಗಬಹುದಾದ
ಯೋಜನೆಗಳಾಗಿವೆ. ಈ ಯೋಜನೆಗಳಿಗೆ ರಾಜ್ಯ ಯೋಜನಾ ಮಂಡಳಿ ಎಲ್ಲಾ ರೀತಿಯ ನೆರವು ನೀಡಲಿದೆ
ಎಂದು ಡಾ. ಜಿಜು ಪಿ ಅಲೆಕ್ಸ್ ಹೇಳಿದರು. ನೂತನ ಯೋಜನಗಳನ್ನು ಪರಿಗಣಿಸುವ ರೀತಿಯಲ್ಲಿ
ಸಾಂಪ್ರದಾಯಿಕ ಲೆಕ್ಕ ಪರಿಶೋಧನಾ ವ್ಯವಸ್ಥೆ ಬದಲಾಗಬೇಕಿದೆ ಎಂದು ಅವರು ಹೇಳಿದರು.
ಕಾಸರಗೋಡು ಮುನ್ಸಿಪಲ್ ಟೌನ್ ಹಾಲ್ ನಲ್ಲಿ ನಡೆದ ಅಭಿವೃದ್ಧಿ ವಿಚಾರ ಸಂಕಿರಣದಲ್ಲಿ
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ
ನಾರಾಯಣ ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಮುಬಾರಕ್ ಪಾಷಾ ಪ್ರಧಾನ ಭಾಷಣ
ಮಾಡಿದರು. ವಿಶೇಷ ಅತಿಥಿಗಳಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ಭಾಗವಹಿಸಿದ್ದರು. ಜಿಲ್ಲಾ
ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಕಿರುಕಾಣಿಕೆ ನೀಡಿದರು. ಜಿಲ್ಲಾ ಪಂಚಾಯತ್
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾಕೃಷ್ಣನ್ 2022-23ನೇ ಸಾಲಿನ ಯೋಜನೆ
ಪರಿಶೀಲಿಸಿದರು. ಜಿಲ್ಲಾ ಪಂಚಾಯತ್ ಯೋಜನಾ ಸಮಿತಿ ಉಪಾಧ್ಯಕ್ಷ ಕೆ. ಬಾಲಕೃಷ್ಣನ್
2023-24ನೇ ಸಾಲಿನ ಕರಡು ಯೋಜನೆ ಮಂಡಿಸಿದರು.
ಬ್ಲಾಕ್ ಪಂಚಾಯತ್ ಸಂಘದ ರಾಜ್ಯ ಉಪಾಧ್ಯಕ್ಷ ಸಿಜಿ ಮ್ಯಾಥ್ಯೂ, ಬ್ಲಾಕ್ ಪಂಚಾಯತ್
ಸಂಘದ ಜಿಲ್ಲಾಧ್ಯಕ್ಷೆ ಎಂ. ಲಕ್ಷ್ಮಿ, ಬ್ಲಾಕ್ ಪಂಚಾಯತ್ ಸಂಘದ ಜಿಲ್ಲಾ ಕಾರ್ಯದರ್ಶಿ
ಕೆ. ಮಣಿಕಂಠನ್, ಗ್ರಾಮ ಪಂಚಾಯತ್ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಟಿ. ಕೆ. ರವಿ,
ಗ್ರಾಮ ಪಂಚಾಯತ್ ಸಂಘದ ಜಿಲ್ಲಾಧ್ಯಕ್ಷ ಕೆ. ಪಿ. ವತ್ಸಲನ್, ಗ್ರಾಮ ಪಂಚಾಯತ್ ಸಂಘದ
ಜಿಲ್ಲಾ ಕಾರ್ಯದರ್ಶಿ ಅಡ್ವ ಎ. ಪಿ. ಉಷಾ, ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ
ಮಾಧವನ್ ಮಣಿಯರ, ಜಿಲ್ಲಾ ಯೋಜನಾ ಸಮಿತಿ (ಸರಕಾರಿ ನಾಮನಿರ್ದೇಶಿತ) ಅಡ್ವ .ಸಿ.
ರಾಮಚಂದ್ರನ್, ಜಿಲ್ಲಾ ಪಂಚಾಯತ್ ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಶಕುಂತಳಾ,
ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಅಡ್ವ .ಎಸ್. ಎನ್.
ಸರಿತಾ, ಜಿಲ್ಲಾ ಪಂಚಾಯತ್ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿನೋಜ್ ಚಾಕೋ, ಕಣ್ಣೂರು
ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಎಂ. ಅಶೋಕನ್ ಮಾತನಾಡಿದರು. ಕಾಸರಗೋಡು
ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಕೆ. ಪ್ರದೀಪನ್ ಸ್ವಾಗತಿಸಿ, ಯೋಜನಾ ಅನುವುಗಾರ ಎಚ್.
ಕೃಷ್ಣ ಧನ್ಯವಾದವಿತ್ತರು. ಸಭೆಯಲ್ಲಿ ತ್ರಿಸ್ಥರ ಪಂಚಾಯತ್ ಅಧ್ಯಕ್ಷರು,
ಜನಪ್ರತಿನಿಧಿಗಳು, ಜಿಲ್ಲಾ ಯೋಜನಾ ಸಮಿತಿ ಸದಸ್ಯರು, ಕಾರ್ಯ ಮಂಡಲದ ಸದಸ್ಯರು ಹಾಗೂ
ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.