ಕಾಸರಗೋಡು: ಮಹಿಳಾ ಸಮಾನತೆಗಾಗಿ ಸಾಂಸ್ಕøತಿಕ ಮುನ್ನಡೆಯ ಸಂದೇಶದೊಂದಿಗೆ ಸಂಸ್ಕೃತಿ ಇಲಾಖೆ, ಭಾಷಾ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಮಂ ಸಾಂಸ್ಕøತಿಕೋತ್ಸವ ಫೆ, 23ರಂದು ಮುನ್ನಾಡ್ ಪಬ್ಲಿಕ್ ಕಾಲೇಜು ವಠಾರದ ಇಎಂಎಸ್ ಅಕ್ಷರ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಫೆ. 26ರ ವರೆಗೆ ಸಾಂಸ್ಕøತಿಕೋತ್ಸವ ನಡೆಯಲಿದೆ.
ಸಮಂ ಸಾಂಸ್ಕøತಿಕೋತ್ಸವದ ಅಂಗವಾಗಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಆಡಳಿತ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಗಿ ಕೊಟ್ಟಾಯಂ ಜಿಲ್ಲಾಧಿಕಾರಿ ಡಾ. ಪಿ.ಕೆ.ಜಯಶ್ರೀ ಅವರಿಗೆ, ಸಾರ್ವಜನಿಕ ಸೇವೆಗಾಗಿರುವ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ ಅವರಿಗೆ ಪ್ರದಾನ ಮಾಡಲಾಗುವುದು.
ಕೃಷಿಗಾಗಿ ಟೀಂ ಬೇಡಡ್ಕ ಕಂಪೆನಿ ಮತ್ತು ಕುಟುಂಬಶ್ರೀ, ಆರೋಗ್ಯ ವಲಯದಲ್ಲಿ ಡಾ. ಗೀತಾ ಗುರುದಾಸ್ (ಸಹಾಯಕ ಡಿಎಂಒ) ಕ್ರೀಡಾ ವಲಯದಲ್ಲಿ ಅನುಪ್ರಿಯಾ (ಥ್ರೋ ಅಕಾಡೆಮಿ ಚೆರುವತ್ತೂರು). ಉದ್ಯಮಿ ರಂಗದಲ್ಲಿ ರಾಜಿ ಕೆ ಮಾವುಂಗಲ್. ನಟನಿಗಿರುವ ಪ್ರಶಸ್ತಿಗೆ ವತ್ಸಲಾ ನಾರಾಯಣನ್, ವಿಕಲಚೇತನ ಪ್ರತಿಭೆಗೆ ಮುನೀಸಾ ಅಂಬಲತ್ತರ, ಆದಿವಾಸಿ ವಿಭಾಗದಲ್ಲಿ ವಿ.ಕೆ.ತಂಗಮಣಿ. ಸಾಹಿತ್ಯ ವಲಯದಲ್ಲಿ ಸೀತಾದೇವಿ ಕರಿಯಾಟ್, ಅಕಾಡಮಿಕ್ ವಲಯದಲ್ಲಿ ಡಾ. ಟಿ ವನಜಾ, ಶಿಕ್ಷಣದಲ್ಲಿ ಡಾ. ಪುಷ್ಪಲತಾ (ಸರ್ಕಾರಿ ಕಾಲೇಜು, ಕಾಸರಗೋಡು), ಕಾರ್ಮಿಕ ವಿಭಾಗದಲ್ಲಿ ಹಸಿರು ಕ್ರಿಯಾಸೇನೆ ಮಡಿಕೈ, ಕಾನೂನು ವಲಯದಲ್ಲಿ ಜೆ.ಜೂಲಿ ಎ.ಮ್ಯಾಥ್ಯೂ (ಅಮೆರಿಕದಲ್ಲಿ ನ್ಯಾಯಾಧೀಶರು)ಅವರನ್ನು ಗೌರವಿಸಲಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಕಾರ್ಯಕ್ರಮದ ಸಂಚಾಲಕ ರಾಮಚಂದ್ರನ್ ಉಪಸ್ಥಿತರಿದ್ದರು.
ಇಂದಿನಿಂದ ಸಮಂ ಸಾಂಸ್ಕøತಿಕೋತ್ಸವ, ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ
0
ಫೆಬ್ರವರಿ 22, 2023
Tags