HEALTH TIPS

ಮುಸ್ಲಿಂ ಸಂಘಟನೆಗಳು ಆರ್.ಎಸ್.ಎಸ್.ನೊಂದಿಗೆ ಮಾತುಕತೆ ಬಯಸುತ್ತವೆ: ಆರ್‍ಎಸ್‍ಎಸ್ ಅಖಿಲ ಭಾರತೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್


            ಕೊಚ್ಚಿ: ಆರ್.ಎಸ್.ಎಸ್.ನೊಂದಿಗೆ ಮಾತನಾಡಲು ದೇಶದ ಹಲವು ಮುಸ್ಲಿಂ ಸಂಘಟನೆಗಳು ಆಸಕ್ತಿಯಿಂದ ಮುಂದೆ ಬರುತ್ತಿದ್ದು, ಇಂತಹ ಮಾತುಕತೆ ಹೊಸದೇನಲ್ಲ ಎಂದು ಆರ್‍ಎಸ್‍ಎಸ್ ಅಖಿಲ ಭಾರತ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
            ಪರಸ್ಪರ ತಪ್ಪು ತಿಳುವಳಿಕೆಯನ್ನು ಸರಿಪಡಿಸಲು ಮುಸ್ಲಿಂ ರಾಷ್ಟ್ರೀಯ ಮಂಚ್ ಅಂತಹ ಸಂಘಟನೆಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದೆ ಎಂದವರು ಮಾಹಿತಿ ನೀಡಿದರು. ಕೊಚ್ಚಿಯಲ್ಲಿ ನಡೆಸಿದ ಮಾಧ್ಯಮ ಸಂವಾದದಲ್ಲಿ ಅವರು ಈ ಬಗ್ಗೆ ತಿಳಿಸಿರುವರು.
          ಇಂತಹ ಸಂಭಾಷಣೆಗಳು ಆರ್‍ಎಸ್‍ಎಸ್‍ಗೆ ಹೊಸದಲ್ಲ. ಕೆ.ಎಸ್. ಸುದರ್ಶನ್ ಅವರು ಸರಸಂಘ ಚಾಲಕರಾಗಿದ್ದ ಅವಧಿಯಲ್ಲಿ ಇಂತಹ ಉಪಕ್ರಮಗಳು ನಡೆದಿತ್ತು. ಇದೀಗ ವಿವಿಧ ಹಂತಗಳಲ್ಲಿ ಮಾತುಕತೆ ನಡೆಯುತ್ತಿದೆ ಅμÉ್ಟೀ. ಮುಸ್ಲಿಂ ಮುಖಂಡರಾದ ವೈ.ಎಸ್. ಖುರೇಷಿ, ನಜೀಬ್ ಜಂಗ್ ಮೊದಲಾದವರು ಆರ್‍ಎಸ್‍ಎಸ್ ಸರಸಂಘ ಚಾಲಕ್ ಡಾ. ಮೋಹನ್ ಭಾಗವತ್ ಅವರೊಂದಿಗಿನ ಸಂಭಾಷಣೆ ಇದರ ಒಂದು ಭಾಗವಾಗಿದೆ ಎಂದರು.
       ಕಾಶ್ಮೀರದಿಂದ ಕೇರಳದವರೆಗೆ ಮತ್ತು ಗುಜರಾತ್‍ನಿಂದ ಮಣಿಪುರದವರೆಗೆ ಮುಸ್ಲಿಂ ರಾಷ್ಟ್ರೀಯ ಮಂಚ್ ನೂರು ಕೇಂದ್ರಗಳಲ್ಲಿ ಇಂತಹ ಸಂವಾದಗಳನ್ನು ನಡೆಸಲಿದೆ. ಮುಸ್ಲಿಂ ಮತ್ತು ಹಿಂದೂ ಗುಂಪುಗಳ ನಡುವೆ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವುದು ಇದರ ಉದ್ದೇಶವಾಗಿದೆ. ಜೆಎನ್‍ಯು ಕ್ಯಾಂಪಸ್‍ನಲ್ಲಿ ಜನವರಿ 30 ಮತ್ತು 31 ರಂದು ಮಧ್ಯ ಏμÁ್ಯ ರಾಷ್ಟ್ರಗಳು ಮತ್ತು ಆರ್‍ಎಸ್‍ಎಸ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು. ಹನ್ನೊಂದು ದೇಶಗಳ ಐವತ್ತು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು ಎಂದು ಅವರು ತಿಳಿಸಿದರು.
          ಅಂತಹ ಚರ್ಚೆಗಳಲ್ಲಿ, ಎರಡೂ ಕಡೆಯ ಮೇಲೆ ಪರಿಣಾಮ ಬೀರುವ ಎಲ್ಲಾ ವಿಷಯಗಳ ಬಗ್ಗೆ ಮುಕ್ತ ಸಂವಾದ ನಡೆಸಲಿದೆ. ಜಗತ್ತಿನಲ್ಲಿ ಎಲ್ಲರೂ ನಂಬಿಕೆಯುಳ್ಳವರು. ಅವರನ್ನು ನಾಸ್ತಿಕರು ಎಂದು ಕರೆಯುವುದು ತಪ್ಪು. ಇಂತಹ ಸಂಭಾಷಣೆಗಳು ಬಾಂಬ್ ಹಿಡಿದು ನಡೆಯುವವರನ್ನು ಮನುಷ್ಯರಂತೆ ಹೇಗೆ ನೋಡಬಹುದು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಂತಹ ಜನರು ಭಯೋತ್ಪಾದಕರು. ಅವರು ಶಿಕ್ಷೆಗೆ ಅರ್ಹರು. ಎಲ್ಲ ಧರ್ಮಗಳನ್ನು ಗೌರವಿಸಬೇಕು. ಲವ್ ಜಿಹಾದ್ ಅಥವಾ ಇನ್ನಾವುದೇ ಮಾರ್ಗಗಳ ಮೂಲಕ ಮತಾಂತರ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು. ಎಲ್ಲಾ ಧರ್ಮಗಳನ್ನು ಗೌರವಿಸುವುದು ಭಾರತದ ಮಾರ್ಗವಾಗಿದೆ. ಕೆಲವರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಏಕೆ ದ್ವೇಷಿಸುತ್ತಾರೆ. ಗೋಹತ್ಯೆ ಕೂಡ ಇಂತಹ ಸಂಭಾಷಣೆಗಳ ವಿಷಯವಾಗಿದೆ. ಈ ಎಲ್ಲಾ ವಿಚಾರಗಳಲ್ಲಿ ಮುಸ್ಲಿಂ ಸಂಘಟನೆಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ ಎಂದು ಇಂದ್ರೇಶ್  ಕುಮಾರ್ ಹೇಳಿದರು. ಕುರಾನ್‍ನಲ್ಲಿ ಗೋಹತ್ಯೆಯ ಬಗ್ಗೆ ಒಂದೇ ಒಂದು ಶ್ಲೋಕವಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ. ಪ್ರವಾದಿ ಮುಹಮ್ಮದ್ ಅವರು ಹಾಲು ಮತ್ತು ತುಪ್ಪ ಮಾನವ ಸೌಂದರ್ಯ ಮತ್ತು ಆರೋಗ್ಯದ ಸಂಕೇತವಾಗಿದೆ ಎಂದು ಇಂದ್ರೇಶ್ ಕುಮಾರ್ ಹೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries