ಮಂಜೇಶ್ವರ: ಆಲಪ್ಪುಳ-ದೇಶೀಯ ಅಧ್ಯಾಪಕ ಪರಿಷತ್ತಿನ (ಎನ್.ಟಿ.ಯು) 44ನೇ ರಾಜ್ಯ ಸಮ್ಮೇಳನವು ಆಲಪ್ಪುಳದಲ್ಲಿ ಆರಂಭವಾಗಿದೆ. ನಂದವನಂ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾಲೋಚಕ ಎನ್.ಕೆ.ಬಾಲಕೃಷ್ಣನ್ ಮಾಸ್ತರ್ ರಾಜ್ಯ ಸಮ್ಮೇಳನದ ಅಂಗವಾಗಿ ಪೂರ್ಣ ಪ್ರಮಾಣದ ರಾಜ್ಯ ಸಮಿತಿ ಸಭೆಯನ್ನು ಉದ್ಘಾಟಿಸಿದರು. ರಾಜ್ಯಾಧ್ಯಕ್ಷ ಪಿ.ಎಸ್.ಗೋಪಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯು ವಾರ್ಷಿಕ ವರದಿ ಮತ್ತು ಆಯ ವ್ಯಯವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.
ರಾಜ್ಯ ಉಪಾಧ್ಯಕ್ಷರಾದ ಆರ್.ಜಿಗಿ, ಪಿ.ವೆಂಕಪ್ಪ ಶೆಟ್ಟಿ, ಎಸ್.ಶ್ಯಾಮಲಾಲ್, ಪ್ರಧಾನ ಕಾರ್ಯದರ್ಶಿ ಟಿ.ಅನೂಪ್ ಕುಮಾರ್, ಖಜಾಂಚಿ ಎಂ.ಟಿ.ಸುರೇಶ್ ಕುಮಾರ್, ಕಾರ್ಯದರ್ಶಿಗಳಾದ ಕೆ.ಪ್ರಭಾಕರ ನಾಯರ್, ಟಿ.ಜೆ.ಹರಿಕುಮಾರ್, ಎ.ಜೆ. ಶ್ರೀನಿ, ಮಹಿಳಾ ಸಂಚಾಲಕಿ ಶೀಮತಿ ಪಿ.ಶ್ರೀದೇವಿ, ಪ್ರಾಥಮಿಕ ಸಂಚಾಲಕ ಕೆ.ಕೆ.ಗಿರೀಶ್ ಕುಮಾರ್, ಹೈಯರ್ ಸೆಕೆಂಡರಿ ಸಂಚಾಲಕ ಜಿ.ಎಸ್.ಬೈಜು, ಉತ್ತರ ಪ್ರಾಂತ ಕಾರ್ಯದರ್ಶಿ ಪಿ.ಕೆ.ಪ್ರಮೋದ್ ಕುಮಾರ್, ಸ್ವಾಗತ ಸಂಘದ ಪ್ರಧಾನ ಸಂಚಾಲಕಿ ಎಸ್.ಉಮಾ ಮೊದಲಾದವರು ಮಾತನಾಡಿದರು. ಸಮ್ಮೇಳನ 2ನೇದಿನ ಶುಕ್ರವಾರ ಬೆಳಗ್ಗೆ ಪ್ರತಿನಿಧಿ ಸಭೆ ಕಾಲಡಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಡಾ. ಕೆ.ಎಸ್.ರಾಧಾಕೃಷ್ಣನ್ ಉದ್ಘಾಟಿಸಿದರು. ಬಳಿಕ ಸೌಹಾರ್ದ ಕೂಟವನ್ನು ವಿದ್ಯಾನಿಕೇತನ ರಾಜ್ಯಾಧ್ಯಕ್ಷ ಪಿ.ಗೋಪಾಲನಕುಟ್ಟಿ ಮಾಸ್ತರ್ ಉದ್ಘಾಟಿಸಿದರು. ಮಧ್ಯಾಹ್ನ 2ಕ್ಕೆ ಸಂಘಟನಾ ಸಭೆ, ಸಂಜೆ 7ಕ್ಕೆ ವೈಚಾರಿಕ ಸಮಾವೇಶ ನಡೆಯಲಿದೆ. ಆರ್.ಎಸ್.ಎಸ್. ಪ್ರಾಂತಪ್ರಮುಖ ಎ ಬಾಲಕೃಷ್ಣನ್ ಶಿಕ್ಷಣ ಕ್ಷೇತ್ರದಲ್ಲಿ ಧಾರ್ಮಿಕ ಮೂಲಭೂತವಾದಿಗಳ ಪ್ರಭಾವ ಕುರಿತು ಉಪನ್ಯಾಸ ನೀಡಿದರು. ಸಮ್ಮೇಳನ ಶನಿವಾರ ಸಮಾರೋಪಗೊಳ್ಳಲಿದೆ.