ಕಾಸರಗೋಡು: ನಗರದ ಮಧ್ಯಭಾಗದಲ್ಲಿ ಒಂಬತ್ತು ವಿದ್ಯುತ್ ಕಂಬಗಳು ಏಕಕಾಲದಲ್ಲಿ ಧರೆಗುರುಳಿದ |ಘಟನೆ ನಿನ್ನೆ ಸಂಜೆ ನಡೆದಿದೆ. ಒಂದು ಸಂಪೂರ್ಣ ಕುಸಿದಿದ್ದು ಉಳಿದವು ಭಾಗಶಃ ಕುಸಿದಿವೆ.
ಕಾಸರಗೋಡು ಹೊಸ ಬಸ್ ನಿಲ್ದಾಣದಿಂದ ನುಳ್ಳಿಪಾಡಿವರೆಗಿನ ಹೈಟೆನ್ಷನ್ ಲೈನ್ ಸೇರಿದಂತೆ ವಿದ್ಯುತ್ ಕಂಬಗಳು ಧರೆಗುರುಳಿವೆ. ರಾಷ್ಟ್ರೀಯ ಹೆದ್ದಾರಿ ನವೀಕರಣದ ಅಂಗವಾಗಿ ನುಳ್ಳಿಪಾಡಿ ಮಸೀದಿಯ ಮುಂಭಾಗದ ಭಾಗವನ್ನು ಕೆಡವುವ ವೇಳೆ ಕಂಬಗಳ ಒಂದು ಭಾಗವು ಸಮೀಪದ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ.
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅದೃಷ್ಟದಿಂದ ದೊಡ್ಡ ಅನಾಹುತ ತಪ್ಪಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಕಾಸರಗೋಡಿನಿಂದ ಚೆರ್ಕಳಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪೋಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ಬೇರೆಡೆಗೆ ಬದಲಾಯಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದಾಗಿ ಈಗಾಗಲೇ ನಗರದ ರಸ್ತೆಗಳಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿದೆ. ಇದೇ ವೇಳೆ ಒಂದು ಕಡೆ ಸಂಚಾರವೂ ಸ್ಥಗಿತಗೊಂಡಿದ್ದರಿಂದ ವಾಹನಗಳು ಸಂಚರಿಸಲು ಪರದಾಡುವಂತಾಗಿತ್ತು.
ಕಂಬಗಳು ಜನ ಹಾಗೂ ವಾಹನಗಳ ಮೇಲೆ ಬೀಳದ ಕಾರಣ ಭಾರೀ ಅನಾಹುತ ತಪ್ಪಿದೆ. ಅಪಘಾತ ಸಂಭವಿಸಿದ ತಕ್ಷಣ ಕೆಎಸ್‍ಇಬಿ ಈ ಮಾರ್ಗದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ವಿದ್ಯುತ್ ವ್ಯತ್ಯಯದಿಂದ ನಗರದ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು. ಬಳಿಕ ಬzಲಿ ವ್ಯವಸ್ಥೆ ಕಲ್ಪಿಸಲಾಯಿತು.
ಕಾಸರಗೋಡು ನಗರದ ಮಧ್ಯಭಾಗದಲ್ಲಿ ಕುಸಿದು ಬಿದ್ದ ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ: ಹೈಟೆನ್ಷನ್ ಲೈನ್ ಸೇರಿದಂತೆ ಕಂಬಗಳು ಜಖಂ
0
ಫೆಬ್ರವರಿ 15, 2023