ಮಂಜೇಶ್ವರ: ಕಳಿಯೂರು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಿ-ಪ್ರೈಮರಿ ವಿದ್ಯಾರ್ಥಿಗಳ ಬ್ಲೂಮಿಂಗ್ ಬಡ್ಸ್ ಚಿಣ್ಣರ ಹಬ್ಬ ಇತ್ತೀಚೆಗೆ ನಡೆಯಿತು. ಮೀಂಜ ಗ್ರಾಮ ಪಂಚಾಯತಿ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಬಾಬು ಕುಳೂರು ಉದ್ಘಾಟಿಸಿದರು. ಶಾಲಾ ಸಂಚಾಲಕ ಫಾದರ್. ಪೌಲ್ ಸಿಕ್ವೇರಾ ಅಧ್ಯಕ್ಷತೆ ವಹಿಸಿದ್ದರು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ., ಬ್ಲಾಕ್ ಕಾರ್ಯನಿರೂಪಣಾಧಿಕಾರಿ ವಿಜಯಕುಮಾರ ಪಾವಳ, ಸಿ.ಆರ್.ಸಿ. ಸಂಯೋಜಕರಾದ ಮೋಹಿನಿ, ಮೀನಾಕ್ಷಿ ಬೊಡ್ಡೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಳಿಕ ಪುಟಾಣಿಗಳಿಂದ ವಿವಿಧ ನೃತ್ಯ ವೈವಿಧ್ಯ ನಡೆಯಿತು.