ಪೆರ್ಲ : ಎಣ್ಮಕಜೆ ಮಂಡಲ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ನಿಯುಕ್ತರಾದ ಫಾರೂಕ್ ಎಫ್ ಆರ್ ಕೆ ಅವರ ಪದಗ್ರಹಣ ಕಾರ್ಯಕ್ರಮ ಪೆರ್ಲದ ಇಂದಿರಾ ಭವನದಲ್ಲಿ ಜರಗಿತು. ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ ಪಿ ಪ್ರದೀಪ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಕುಂಬಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಗಾಂಭೀರ್, ರಾಧಾಕೃಷ್ಣ ನಾಯಕ್ ಶೇಣಿ, ನೇತಾರರಾದ ರವೀಂದ್ರನಾಥ ನಾಯಕ್ ಶೇಣಿ ತೋಟದಮನೆ, ಮುಸ್ಲಿಂಲೀಗ್ ಮಂಜೇಶ್ವರ ನಿಯೋಜಕ ಮಂಡಲ ಕಾರ್ಯದರ್ಶಿ ಸಿದ್ಧೀಕ್ ವಳಮುಗರ್, ಯೂತ್ ಕಾಂಗ್ರೆಸ್ ನಿಯೋಜಕ ಮಂಡಲ ಉಪಾಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಕುಂಬಳೆ, ಜಯಶ್ರೀ ಕುಲಾಲ್, ರಸಾಕ್ ನಲ್ಕ, ಇμರ್Áದ್ ಮಂಜೇಶ್ವರ ಮುಂತಾದವರು ಶುಭ ಹಾರೈಸಿದರು. ಯೂತ್ ಕಾಂಗ್ರೆಸಿನ ಸಾಮಾಜಿಕ ಮಾಧ್ಯಮ ಜಿಲ್ಲಾ ಸಂಯೋಜಕ ಶಾಕಿರ್ ಜಮಾಲ್ ಗುಣಾಜೆ, ನಿಯೋಜಕ ಮಂಡಲ ಯೂತ್ ಕಾಂಗ್ರೆಸ್ ಸಮಿತಿಗೆ ನಿಯುಕ್ತರಾದ ನಿಸಾರ್ ಬಣ್ಪುತ್ತಡ್ಕ, ಲತ್ತೀಫ್ ಕುಡುಪಂಕುಳಿ, ರಘು ಕಾವುತ್ತಮೂಲೆ, ಪ್ರಶಾಂತ್ ಭಟ್ ಕಾಟುಕುಕ್ಕೆ ಮೊದಲಾದವರನ್ನು ಅಭಿನಂದಿಸಲಾಯಿತು.