ತಿರುವನಂತಪುರಂ: ಎಂ.ಶಿವಶಂಕರ್ ಮತ್ತು ಸ್ವಪ್ನಾ ಸುರೇಶ್ ನಡುವಿನ ಹೆಚ್ಚಿನ ಚಾಟ್‍ಗಳು ಹೊರಬಿದ್ದಿವೆ. ಯುಎಇಯಲ್ಲಿರುವ ರೆಡ್ ಕ್ರೆಸೆಂಟ್ ಅನ್ನು ಲೈಫ್ ಮಿಷನ್ ಯೋಜನೆಗೆ ಹೇಗೆ ತರುವುದು ಎಂದು ಶಿವಶಂಕರ್ ಸ್ವಪ್ನಾಗೆ ತಿಳಿಸಿದ್ದ ಚಾಟ್ ಗಳು ಬಹಿರಂಗಗೊಂಡಿದೆ.
ರೆಡ್ ಕ್ರೆಸೆಂಟ್ ನೀಡಲಿರುವ ಪತ್ರದ ರೂಪುರೇμÉಯನ್ನೂ ಸ್ವತಃ ಶಿವಶಂಕರ್ ಅವರೇ ಸರ್ಕಾರಕ್ಕೆ ನೀಡಿದ್ದರು. ಶಿವಶಂಕರ್ ಮತ್ತು ಸ್ವಪ್ನಾ ಸುರೇಶ್ ನಡುವಿನ ಈ ವಾಟ್ಸಾಪ್ ಚಾಟ್ ಸೆಪ್ಟೆಂಬರ್ 2019 ರಲ್ಲಿ ನಡೆದಿತ್ತು. ದೂತಾವಾಸದ ಪತ್ರದ ಜತೆಗೆ ಮುಖ್ಯಮಂತ್ರಿಗಳಿಗೂ ಪತ್ರ ಕಳುಹಿಸುವಂತೆ ಸೂಚಿಸಲಾಗಿತ್ತು.
ಎರಡೂ ಪತ್ರಗಳನ್ನು ಸಿದ್ಧಪಡಿಸಿ ತನ್ನ ಕೈಗೆ ಕೊಡುವಂತೆ ಶಿವಶಂಕರ್ ಕೇಳಿಕೊಂಡರು. ಅಗತ್ಯಬಿದ್ದರೆ ಮುಖ್ಯಮಂತ್ರಿಗಳ ಹೆಚ್ಚುವರಿ ಖಾಸಗಿ ಕಾರ್ಯದರ್ಶಿಯಾಗಿದ್ದ ಸಿ.ಎಂ.ರವೀಂದ್ರನ್ ಅವರನ್ನೂ ಕರೆಸಿಕೊಳ್ಳುವಂತೆ ಸ್ವಪನ ಅವರಿಗೆ ಸೂಚಿಸಲಾಗಿತ್ತು. ಯುಎಇ ರೆಡ್ ಕ್ರೆಸೆಂಟ್ ಅನ್ನು ಲೈಫ್ ಮಿಷನ್ ಒಪ್ಪಂದದಲ್ಲಿ ತೊಡಗಿಸಿಕೊಳ್ಳಲು ಶಿವಶಂಕರ್ ಅವರ ಯೋಜಿತ ಕ್ರಮವೆಂದು ಇ.ಡಿ ಮತ್ತು ಸಿ.ಬಿ.ಐ ಈ ಚಾಟ್ ಅನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡುತ್ತಿವೆ.
ಶಿವಶಂಕರ್ ಮತ್ತು ಸಪ್ನಾ ಅವರ ಪೋನ್‍ನ ಫೆÇರೆನ್ಸಿಕ್ ಪರೀಕ್ಷೆಯಿಂದ ಇಡಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಪ್ರತಿ ಬಾರಿ ಸ್ವಪ್ನಾ ಮತ್ತು ವೇಣುಗೋಪಾಲ್ ಹೆಸರಿನಲ್ಲಿರುವ ಲಾಕರ್ ಅನ್ನು ತೆರೆದಾಗ ಶಿವಶಂಕರ್‍ಗೆ ಅದರ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ನಿನ್ನೆ ಶಿವಶಂಕರ್ ಅವರ ಚಾರ್ಟೆಡ್ ಅಕೌಂಟೆಂಟ್ ವೇಣುಗೋಪಾಲ್ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ. ಶಿವಶಂಕರ್ ಹೇಳಿದ ನಂತರ ತನ್ನ ಮತ್ತು ಸ್ವಪ್ನಾ ಹೆಸರಿನಲ್ಲಿರುವ ಲಾಕರ್ ತೆರೆದೆ ಎಂದು ವೇಣುಗೋಪಾಲ್ ಹೇಳಿದ್ದಾರೆ.
ಲೈಫ್ ಮಿಷನ್ ಯೋಜನೆಗೆ ರೆಡ್ ಕ್ರೆಸೆಂಟ್ ನ್ನು ಹೇಗೆ ತರುವುದು ಎಂಬುದರ ಕುರಿತು ಶಿವಶಂಕರ್ ಸಲಹೆ ನೀಡಿದ್ದರು: ಸಪ್ನಾ ಜೊತೆಗೆ ನಡೆಸಿದ ಮತ್ತಷ್ಟು ಚಾಟ್ ಗಳು ಬಹಿರಂಗ
0
ಫೆಬ್ರವರಿ 17, 2023