ಬದಿಯಡ್ಕ: ಬದಿಯಡ್ಕ ವಿಷ್ಣುಮೂರ್ತಿ ಸೇವಾ ಸಮಿತಿ ಆಶ್ರಯದಲ್ಲಿ ಒತ್ತೆ ಕೊಲ ಕೆಂಡ ಸೇವೆ ಮಹೋತ್ಸವ ವಿವಿಧ ಸಾಂಸ್ಕøತಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಏಪ್ರಿಲ್ 24 ಮತ್ತು 25ರಂದು ವಿಷ್ಣುಮೂರ್ತಿ ನಗರ ಬೋಳುಕಟ್ಟೆಯಲ್ಲಿ ನಡೆಯಲಿರುವುದು.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ವಿಷ್ಣುಮೂರ್ತಿ ನಗರ ಬೋಳು ಕಟ್ಟೆಯಲ್ಲಿ ಜರಗಿತು. ಸೇವಾ ಸಮಿತಿ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ ಅಧ್ಯಕ್ಷತೆ ವಹಿಸಿದರು. ಸಮಿತಿ ಉಪಾಧ್ಯಕ್ಷ ಜಗನ್ನಾಥ ರೈ ಕೊರೆಕ್ಕಾನ, ವಿಜಯ ಸಾಯಿ ಬದಿಯಡ್ಕ, ಜೊತೆ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ಮಣಿಯಾಣಿ, ಮಹಾಲಿಂಗ ನವಕಾನ, ರಾಮ ಮುರಿಯಂಕೂಡ್ಲು, ಲೆಕ್ಕ ಪರಿಶೋಧಕ ನಿರಂಜನ್ ರೈ ಪೆರಡಾಲ, ಸೇವಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು. ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ವಳಮಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಕೋಶಾಧಿಕಾರಿ ಪಿ.ಜಿ. ಜಗನ್ನಾಥ ರೈ ವಂದಿಸಿದರು.
ಬದಿಯಡ್ಕ ಒತ್ತೆಕೋಲ ಕೆಂಡಸೇವೆ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 12, 2023