ಕಾಸರಗೋಡು: ವಿದ್ಯಾರ್ಥಿ ಸಂಘಟನೆಯೊಂದರ ಪ್ರಬಲ ವಿರೋಧವನ್ನೂ ಲೆಕ್ಕಿಸದೆ ತನ್ನ ಕರ್ತವ್ಯ ನಿರ್ವಹಿಸಿಕೊಮಡು ಬಂದಿರುವ ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲೆ ಎಂ. ರಮಾ ಕೊನೆಗೂ ದೀಘಾ ಕಾಲದ ರಜೆಯಲ್ಲಿ ತೆರಳಿದ್ದಾರೆ.
ಪ್ರಭಾರ ಪ್ರಾಂಶುಪಾಲರಿಗೆ ರಜೆ ಅರ್ಜಿ ಸಲ್ಲಿಸಿದ್ದು, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಾ. 31ರ ವರೆಗೆ ರಜೆಯಲ್ಲಿ ತೆರಳುವುದಾಗಿ ತಿಳಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಕಾಲೇಜು ವಿದ್ಯಾರ್ಥಿಘಳು ಎಸ್‍ಎಫೈ ಸಂಘಟನೆ ಮೂಲಕ ಪ್ರಾಂಶುಪಾಲರ ಕಚೇರಿಗೆ ತೆರಳಿದ್ದು, ಈ ಸಂದರ್ಭ ಉಂಟಾದ ಚರ್ಚೆ ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪೂರ್ವ ವಿದ್ಯಾರ್ಥಿಗಳು ಅನೈತಿಕ ಚಟುವಟಿಕೆಗೆ ಪ್ರೋತ್ಸಾಹ ಹಾಗೂ ಮಾದಕ ದ್ರವ್ಯ ಬಳಕೆಯಾಗುತ್ತಿರುವ ಬಗ್ಗೆಯೂ ಪ್ರಾಂಶುಪಾಲರು ಆರೋಪಿಸಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರ ಮಧ್ಯೆ ಭಾರಿ ವಾಗ್ವಾದಕ್ಕೂ ಖಾರಣವಾಗಿತ್ತು. ಈ ಮಧ್ಯೆ ಪ್ರಾಂಶುಪಾಲರ ಕರ್ತವ್ಯಕ್ಕೆ ಅಡ್ಡಿಪಡಿಸಿದ 60ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಎಸ್‍ಎಫ್‍ಐ ಸಂಘಟನೆ ಕಾರ್ಯಕರ್ತರ ತಂಡವೊಂದು ತನ್ನ ಕೊಲೆಗೂ ಯತ್ನಿಸಿದ್ದಾರೆ. ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಡಕುಂಟಾಗಲಿದೆ. ಪರೀಕ್ಷೆಯೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮುಷ್ಕರದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ರಜೆಯಲ್ಲಿ ತೆರಳುವುದಾಗಿ ಎಂ. ರಮಾ ತಿಳಿಸಿದ್ದಾರೆ.
ರಜೆಯಲ್ಲಿ ತೆರಳಿದ ಪ್ರಾಂಶುಪಾಲೆ: ಸರ್ಕಾರಿ ಕಾಲೇಜು ಸಮಸ್ಯೆಗೆ ತಾತ್ಕಾಲಿಕ ಪರಿಹಾರ
0
ಫೆಬ್ರವರಿ 28, 2023