ಕಾಸರಗೋಡು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅವಭ್ರತಸ್ನಾನದೊಂದಿಗೆ ಸಂಪನ್ನಗೊಂಡಿತು. ಸೋಮವಾರ ಧ್ವಜಾರೋಹಣ ನಡೆಯಿತು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಶುಕ್ರವಾರ ರಾತ್ರಿ ಶ್ರೀ ಮಠದ ಎದುರು ನೃತ್ಯೋತ್ಸವ, ಕೆರೆಯಲ್ಲಿ ತೆಪ್ಪೋತ್ಸವ, ಅವಭೃತಸ್ನಾನ, ಧ್ವಜಾವರೋಹಣ ನಡೆಯಿತು. ಉತ್ಸವ ಸಂದರ್ಭ ಉದ್ಯಮಿ ಸತೀಶ್‍ರಾವ್ ದಂಪತಿ ಎಡನೀರು ಅವರ ಕೊಡುಗೆಯನ್ವಯ ನಿರ್ಮಿಸಲಾದ ಮಹಾದ್ವಾರದ ಉದ್ಘಾಟನೆ, ಉಮೇಶ್ ಕುಮಾರ್ ಎಡನೀರು ಕೊಡುಗೆಯಾಗಿ ನಿರ್ಮಿಸಲಾದ ಶ್ರೀದೇವರ ಕಟ್ಟೆಯ ಸಮರ್ಪಣೆ, ಶ್ರೀ ತಾರಾ ಸುಧೀಂದ್ರ ಮುಂಬೈ ಕೊಡುಗೆಯಾಗಿ ನೀಡಿದ ಉತ್ಸವ ಮೂರ್ತಿಯ ಸಮರ್ಪಣಾ ಕಾರ್ಯವೂ ನೆರವೇರಿತು.
ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ
0
ಫೆಬ್ರವರಿ 19, 2023