ಕಾಸರಗೋಡು: ಚೆರ್ವತ್ತೂರು ಕುನ್ನಂಕುಳಂ ತರವಾಡು ಮುಂಡ್ಯ ದೈವಸ್ಥಾನದ ಕಳಿಯಾಟ ಮಹೋತ್ಸವ ಫೆ. 26 (ಇಂದು) ಹಾಗೂ ನಾಳೆ ನಡೆಯಲಿದೆ ಎಂದು ದೈವಸ್ಥಾನದ ಪದಾಧಿಕಾರಿಗಳು ಚೆರ್ವತ್ತೂರು ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾನುವಾರ ಸಂಜೆ 6ಕ್ಕೆ ಅಕ್ಷರ ಶ್ಲೋಕ ಸಭೆ ನಡೆಯಲಿದೆ. ಈ ಸಂದರ್ಭ ಗೌರವಾರ್ಪಣೆ,ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. 7 ಕ್ಕೆ ತೊಡಂಙಲ್, ನಂತರ ಪ್ಯೂಶ್ ಟೇಕ್ವಾಂಡೋ ಸಂಗೀತ ಪ್ರಾತ್ಯಕ್ಷಿಕೆ, ಲಾಸ್ಯ ಕಲಾ ಕುಟ್ಟಮತ್ ಅವರಿಂದ ಫ್ಯೂಷನ್ ಡ್ಯಾನ್ಸ್ ಹಾಗೂ ತರವಾಡ ವನಿತಾ ಸಮಿತಿಯಿಂದ ಕೈಕೆಟ್ಟಿ ಕಳಿ ಪ್ರದರ್ಶನ ನಡೆಯಲಿದೆ. ರಾತ್ರಿ 11 ಕ್ಕೆ ಅಚ್ಚನ್ ತೈಯ್ಯಂನ ಆರಂಭ,ನೃತ್ಯ ಪ್ರದರ್ಶನ ನಡೆಯಲಿದೆ. ಸೋಮವಾರ ಬೆಳಗ್ಗೆ ರಕ್ತ ಚಾಮುಂಡಿ, ಅಂಕಕುಳಂಗರ ಭಗವತಿ, ಮಾಡೈಲ್ ಚಾಮುಂಡಿ ಹಾಗೂ ಗುಳಿಗ ದೈವಕೋಲ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನದಾನ ನಡೆಯಲಿದೆ ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿ.ರಾಜನ್, ಕೆ.ಸುಕುಮಾರನ್, ಎಂ.ನಾರಾಯಣನ್, ಎ.ಸುಕುಮಾರನ್, ಕೆ.ದಾಮೋದರನ್, ಕೆ.ಕುಂಞÂ ಕಣ್ಣನ್ ಮಾಹಿತಿ ನೀಡಿದರು.
ಕನ್ನಂಕುಳಂ ತರವಾಡ್ ಕಳಿಯಾಟ ಮಹೋತ್ಸವ ಇಂದಿನಿಂದ
0
ಫೆಬ್ರವರಿ 25, 2023