ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ'ನಾರಿ ಚಿನ್ನಾರಿ'ಯ ಉದ್ಘಾಟನೆ ಮತ್ತು ಪ್ರತಿಭಾ ಸಿಂಚನ ಕಾರ್ಯಕ್ರಮ ಫೆ. 19ರಂದು ಮಧ್ಯಾಹ್ನ 3ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದೊಂದಿಗೆ ಕಾರ್ಯಕ್ರಮ ಜರುಗಲಿದೆ.
ಖ್ಯಾತ ವೈದ್ಯೆ ಡಾ. ಜಯಶ್ರೀ ನಾಗರಾಜ್ ಉದ್ಘಾಟಿಸುವರು. ಖ್ಯಾತ ಲೆಕ್ಕ ಪರಿಶೋಧಕಿ ತಾರಾಜಗದೀಶ್ ಅಧ್ಯಕ್ಷತೆ ವಹಿಸುವರು. ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ ರಂಜಿತಾ ಶೇಟ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕಲಾವಿದೆ, ನಿವೃತ್ತ ಬಿಎಸ್ಸೆನ್ನೆಲ್ ಉದ್ಯೋಗಿ ಗೀತಾರಾಮಚಂದ್ರ ಶೆಣೈ ಉಪಸ್ಥಿತರಿರುವರು. ಈ ಸಂದರ್ಭ ಪ್ರತಿಭಾ ಸಿಂಚನ ಕಾರ್ಯಕ್ರಮ ಜರುಗಲಿದೆ. ದಿಯಾ ಶೆಣೈ ಬೀರಂತಬೈಲ್ ಅವರಿಂದ ಅಭಿಯ ನೃತ್ಯ, ರಕ್ಷಾ ಸರ್ಪಂಗಳ ಅವರಿಂದ ಭಕ್ತಿಗೀತೆ, ಆದ್ಯಂತ ಅಡೂರು ಅವರಿಂದ ತಬಲಾ ಸಹಿತ ಭಾವಗಾಯನ, ಕನಿಹಾ ಅನಂತಪುರ ಅವರಿಂದ ಜಾನಪದ ನೃತ್ಯ, ಶ್ರೀಮತಿ ಸುನಂದಾ, ಅಕ್ಷಿತಾ ಬೆದ್ರಡ್ಕ ಅವರಿಂದ ಕೀರ್ತನೆ, ಲಲಿತಾ ಉಪ್ಪಳ ಅವರಿಂದ ಶೋಭಾನೆ ಹಾಡು, ಪ್ರಣಮ್ಯ ನೀರ್ಚಾಲು ಅವರಿಂದ ಕವನ ವಾಚನ, ಮಾ. ಶಿವಕುಮಾರ್ ನಾಯ್ಕಾಪು ಅವರಿಂದ ತಬಲಾ ವಾದನ, ಕಾಸರಗೋಡಿನ ರಮ್ಯಾರಾವ್ ಬಳಗದಿಂದ ಯಕ್ಷಗಾನ, ಕಾಸರಗೋಡು ಅನ್ವಿತಾ ಕಾಮತ್ ಅವರಿಂದ ಕೀರ್ತನೆ, ಚೋಮು ಚೇನಕ್ಕೋಡು ಅವರಿಂದ ತುಳು ಜಾನಪದ ಕವಿತೆ(ಓಬೇಲೆ ಹಾಡು), ಗೌರಿಪ್ರಿಯಾ ಅಣಂಗೂರು ಅವರಿಂದ ಶಾಸ್ತ್ರೀಯ ಸಂಗೀತ, ಮೇಧಾ ನಾಯರ್ಪಳ್ಳ ಅವರಿಂದ ಕಾವ್ಯ ವಾಚನ ನಡೆಯುವುದು.
'ನಾರಿ ಚಿನ್ನಾರಿ'ಯ ಉದ್ಘಾಟನೆ, ಪ್ರತಿಭಾ ಸಿಂಚನ ಕಾರ್ಯಕ್ರಮ
0
ಫೆಬ್ರವರಿ 16, 2023
Tags