ಬದಿಯಡ್ಕ: ನೀರ್ಚಾಲು ಕಿಳಿಂಗಾರು ಸಮೀಪದ ನಿಡುಗಳ ಪಂಜಿಕಲ್ಲು ಶ್ರೀ ಧೂಮಾವತಿ ಮತ್ತು ಇತರ ದೈವಗಳ ವಾರ್ಷಿಕ ಉತ್ಸವ ಧರ್ಮನೇಮ ಕುದುರೆಬಳ್ಳಿಯಲ್ಲಿ ಶನಿವಾರ ಹಾಗೂ ಭಾನುವಾರಗಳಂದು ಜರಗಿತು. ಶನಿವಾರ ಮಧ್ಯಾಹ್ನ ಶಾಸ್ತಾರ ಪೂಜೆ, ಶ್ರೀ ಶಂಕರನಾರಾಯಣ ಪೂಜೆ, ಮಧ್ಯಾಹ್ನ ಧರ್ಮಸಮಾರಾಧನೆ, ಸಂಜೆ ಶ್ರೀ ದೈವಗಳ ಭಂಡಾರ ಚಾವಡಿಯಿಂದ ಹೊರಟು ಕುದುರೆಬಳ್ಳಿಯಲ್ಲಿ ಉತ್ಸವ ಪ್ರಾರಂಭವಾಯಿತು. ಭಾನುವಾರ ಬೆಳಗ್ಗೆ ಪೂಮಾಣಿ-ಕಿನ್ನಿಮಾಣಿ ದೈವಗಳನೇಮ, ಕಣಿಯಾಟಿ ದೈವದ ಕೋಲ, ಮಧ್ಯಾಹ್ನ ಶ್ರೀ ಧೂಮಾವತಿ ದೈವದ ಕೋಲ, ಅಪರಾಹ್ನ ಶ್ರೀ ರಾಜದೈವದ ಕೋಲ ಮತ್ತು ಪರಿವಾರ ದೈವಗಳ ಕೋಲ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ನಿಡುಗಳ ಕುದುರೆಬಳ್ಳಿಯಲ್ಲಿ ದೈವಗಳ ನೇಮ
0
ಫೆಬ್ರವರಿ 21, 2023
Tags