ಬದಿಯಡ್ಕ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀಎಡನೀರು ಮಠದಲ್ಲಿ ನೂತನವಾಗಿ ನಿರ್ಮಿಸಿದ ಮಹಾದ್ವಾರ ಮತ್ತು ದೇವರಕಟ್ಟೆಯ ಸಮರ್ಪಣೆ ಗುರುವಾರ ಸಂಜೆ ನೆರವೇರಿತು.
ಶ್ರೀಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತಿ ಶ್ರೀಗಳು ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಮಾಜಿ ಸಚಿವ, ಕಾಞಂಗಾಡ್ ಶಾಸಕ ಇ.ಚಂದ್ರಶೇಖರನ್ ಮಹಾದ್ವಾರವನ್ನು ಉದ್ಘಾಟಿಸಿದರು. ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಕೆ.ಸತೀಶ್ ರಾವ್ ಎಡನೀರು ಮಹಾದ್ವಾರವನ್ನು ಹಾಗೂ ಉಮೇಶ್ ಕುಮಾರ್ ಎಡನೀರು ಅವರು ದೇವರಕಟ್ಟೆಯನ್ನು ಸೇವಾರೂಪದಲ್ಲಿ ಸಮರ್ಪಿಸಿದ್ದಾರೆ.
ಎಡನೀರು ಮಠ: ನೂತನ ಮಹಾದ್ವಾರ ಸಮರ್ಪಣೆ
0
ಫೆಬ್ರವರಿ 17, 2023